newsics.com
ಬೆಂಗಳೂರು: ಕೊರೋನಾ ನಿಯಂತ್ರಣ ಸಂಬಂಧ ಲಸಿಕೆ ಪಡೆದುಕೊಳ್ಳುವಂತೆ ಎಲ್ಲರಿಗೂ ಮನವಿ ಮಾಡಿಕೊಳ್ಳಲಾಗಿದೆ. ಕೊರೋನಾ ಲಸಿಕೆ ದೊರೆಯುತ್ತಿದ್ದರೂ ಜನರು ಅದನ್ನು ಪಡೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಸಿದೆ ಎಂದು ಕಾನೂನು ಸಚಿವ ಮಾಧು ಸ್ವಾಮಿ ತಿಳಿಸಿದ್ದಾರೆ.
ಕೊರೋನಾ ಲಸಿಕೆ ಪಡೆದುಕೊಳ್ಳುವಂತೆ ಜನರಿಗೆ ಮನವಿ ಮಾಡಿಕೊಳ್ಳಲಾಗಿದೆ. ಲಸಿಕೆ ಪಡೆಯದವರಿಗೆ ಪಡಿತರ ಪೂರೈಕೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ಮಾಧು ಸ್ವಾಮಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಚಾಮರಾಜನಗರ , ಯಾದಗಿರಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅವರ ಮನವೊಲಿಕೆಗೆ ಜಿಲ್ಲಾಡಳಿತ ಹರ ಸಾಹಸ ಪಡುತ್ತಿದೆ.