ಬಳ್ಳಾರಿ: ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ನೀಡದ ಕಾರಣ ವ್ಯಕ್ತಿಯೊಬ್ಬರು ತನ್ನ ಮಗಳನ್ನು ತುರ್ತು ನಿಗಾ ಘಟಕದಿಂದ ಮತ್ತೊಂದು ಘಟಕಕ್ಕೆ ಹೆಗಲ ಮೇಲೆ ಹೊತ್ತೊಯ್ದ ಘಟನೆ ಗುರುವಾರ ನಡೆದಿದೆ.
ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಮಾಬಾಷಾ ಎಂಬುವರು ತಮ್ಮ ಮಗಳು ಶ್ರೀಂಥಾಜ್ ಗೆ ಅವರಿಗೆ ಚಿಕಿತ್ಸೆ
ಕೊಡಿಸುವ ಸಲುವಾಗಿ ಆ್ಯಂಬುಲೆನ್ಸ್ ನಲ್ಲಿ
ವಿಮ್ಸ್ ಆಸ್ಪತ್ರೆಗೆ ಕರೆತಂದಾಗ ಘಟನೆ ನಡೆಯಿತು.
ಆಂಬುಲೆನ್ಸ್ ತುರ್ತು ನಿಗಾ ಘಟಕದ ಮುಂಭಾಗ ಇಳಿಸಿ ಮುಂದೆ ಹೋದ ಬಳಿಕ, ಅವರಿಗೆ ಅಲ್ಲಿನ ಸಿಬ್ಬಂದಿ ಬೇರೊಂದು ಘಟಕಕ್ಕೆ ತೆರಳುವಂತೆ ಸೂಚಿಸಿದರು. ಆದರೆ ವ್ಹೀಲ್ ಚೇರ್ ಕೊಡಲಿಲ್ಲ. ಮಗಳನ್ನು ದಾಖಲಿಸುವ ಘಟಕದ ಸಿಬ್ಬಂದಿಗೆ ಮಾಹಿತಿ ನೀಡಿ ವ್ಹೀಲ್ ಚೇರ್ ತರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಗಳನ್ನು ಬಿಟ್ಟು ಎಲ್ಲಿಗೂ ಹೋಗಲು ಆಗದೆ ಅಸಹಾಯಕತೆಯಿಂದ ತಂದೆ ತಾವೇ ಹೆಗಲ ಮೇಲೆ ಮಗಳನ್ನು ಹೊತ್ತುಕೊಂಡು ಹೋದರು. ಈ ವೀಡಿಯೊ ತುಣುಕೊಂದು ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ.