Newsics.com
ಚಿಕ್ಕಮಗಳೂರು: ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಅವರ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಪುತ್ರಿ ಮಾಳವಿಕ ಸಿದ್ಧಾರ್ಥ ಅವರಿಗೆ ಬಂಧನದ ಭೀತಿ ಎದುರಾಗಿದೆ. ಅವರು ಕಾಫಿ ಬೆಳೆಗಾರರೊಬ್ಬರಿಗೆ ನೀಡಿದ ಚೆಕ್ ಬೌನ್ಸ್ ಆಗಿದೆ.
ಈ ಸಂಬಂಧ ಬೆಳೆಗಾರ ದೂರು ನೀಡಿದ್ದು, ಮೂಡಿಗೆರೆ ಜೆಎಂಎಫ್ ಸಿ ನ್ಯಾಯಾಲಯ ಮಾಳವಿಕ ಸಿದ್ಧಾರ್ಥ ಅವರಿಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಚಿಕ್ಕಮಗಳೂರಿನ ಬಹುತೇಕ ಕಾಫಿ ಬೆಳೆಗಾರರು ಸಿದ್ದಾರ್ಥ ಒಡೆತನದ ಸಂಸ್ಥೆಗೆ ಕಾಫಿ ನೀಡುತ್ತಿದ್ದರು. ಆರಂಭದಲ್ಲಿ ಸಕಾಲದಲ್ಲಿ ಪಾವತಿ ಮಾಡುತ್ತಿದ್ದ ಸಂಸ್ಥೆ ಬಳಿಕ ವಿಳಂಬ ಮಾಡಿತ್ತು ಎಂದು ಆರೋಪಿಸಲಾಗಿದೆ.
ಸಿದ್ಧಾರ್ಥ ಅವರ ನಿಧನದ ಬಳಿಕ ಅವರ ಪತ್ನಿ ಮಾಳವಿಕ ಸಿದ್ಧಾರ್ಥ ಅವರು ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದಾರೆ. ಸಂಸ್ಥೆಯ ಸಾಲ ತೀರಿಸಲು ಹಲವು ಆಸ್ತಿಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ.
ಕಾಫಿ ಬೆಳೆಗಾರರಿಗೆ ಸಿದ್ದಾರ್ಥ ಒಡೆತನದಲ್ಲಿದ್ದ ಸಂಸ್ಥೆ 100 ಕೋಟಿ ರೂಪಾಯಿ ಬಾಕಿ ಇರಿಸಿದೆ ಎಂದು ಹೇಳಲಾಗಿದೆ.