Saturday, April 17, 2021

ಕಾರವಾರಕ್ಕೆ ದಾರಿ ತಪ್ಪಿ ಬಂದ ಉತ್ತರ ಕರ್ನಾಟಕ ಬಸ್’ಗಳು!

ಕಾರವಾರ: ಉತ್ತರ ಕರ್ನಾಟಕ ಭಾಗಕ್ಕೆ ತೆರಳಬೇಕಿದ್ದ ಐದು ಸಾರಿಗೆ ಬಸ್ ಗಳು ದಾರಿ ತಪ್ಪಿ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಬಂದಿದ್ದು, ಬಳಿಕ ಉತ್ತರ ಕರ್ನಾಟಕಕ್ಕೆ ತೆರಳಿವೆ.
ಬಾಗಲಕೋಟೆ, ಸಿಂಧಗಿ, ಮುದ್ದೇಬಿಹಾಳ ಸೇರಿದಂತೆ ವಿವಿಧೆಡೆ ತೆರಳಲು ಬೆಂಗಳೂರಿನಿಂದ ಬಂದಿದ್ದ ಸಾರಿಗೆ ಬಸ್ ಗಳು ದಾರಿ ತಪ್ಪಿ ಬೆಳ್ಳಂಬೆಳಗ್ಗೆ ಕಾರವಾರದ ಬಸ್ ನಿಲ್ದಾಣಕ್ಕೆ ಬಂದಿವೆ.
ಬೆಂಗಳೂರಿನಿಂದ ಪ್ರಯಾಣಿಕರನ್ನು ಕರೆದುಕೊಂಡು ಹೊರಟಿದ್ದ ಐದು ಬಸ್ ಗಳು, ದಾವಣಗೆರೆ ಮಾರ್ಗವಾಗಿ ತೆರಳಿದ್ದವು. ಆದರೆ, ದಾವಣಗೆರೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿರುವುದರಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದಾಗಿ ಶಿವಮೊಗ್ಗ ಮಾರ್ಗದಲ್ಲಿ ಬಂದ ಬಸ್, ದಾರಿ ತಪ್ಪಿ ಕಾರವಾರಕ್ಕೆ ಬಂದುಬಿಟ್ಟಿವೆ.
ಕಾರವಾರದ ಬಸ್ ನಿಲ್ದಾಣದಲ್ಲಿ ಕೆಲ ಹೊತ್ತು ಇದ್ದ ಬಸ್ ಗಳು, ಬಳಿಕ ಸ್ಥಳೀಯ ಸಿಬ್ಬಂದಿಯಿಂದ ಮಾರ್ಗಗಳ ಮಾಹಿತಿ ಪಡೆದು ಸುಮಾರು 7 ಗಂಟೆಯ ವೇಳೆಗೆ ಮರಳಿ ಉತ್ತರ ಕರ್ನಾಟಕದ ಭಾಗಕ್ಕೆ ತೆರಳಿವೆ.

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...

41 ಅಕ್ರಮ ವಲಸಿಗರ ಜಲ ಸಮಾಧಿ

newsics.com ಟ್ಯುನಿಷಿಯಾ: ಇಟಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 41 ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯುನಿಷಿಯಾ ಸಮುದ್ರ ತೀರದಲ್ಲಿ ಈ  ದುರಂತ ಸಂಭವಿಸಿದೆ. ಈ ವಲಸಿಗರಿದ್ದ ಹಡಗು ಅಪಘಾತಕ್ಕೀಡಾದ ಪರಿಣಾಮ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ....
- Advertisement -
error: Content is protected !!