newsics.com
ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ.
ಕೊರಚ ಮತ್ತು ಕೊರಮ ಸಮುದಾಯದ ಜನರು ನಾಗರ ಪಂಚಮಿ ದಿನದಂದು ಸಾಮಾನ್ಯವಾಗಿ ಎಲ್ಲರಂತೆ ಪೂಜೆ ಮಾಡುತ್ತಾರೆ. ಆದ್ರೇ ಶ್ರಾವಣ ಮಾಸದ ಎರಡನೇ ಭಾನುವಾರ ಕೋಳಿಯ ಕತ್ತನ್ನು ಕೊಯ್ದು ರಕ್ತವನ್ನು ಹುತ್ತದ ಮೇಲೆ ಹಾಕುವ ಪದ್ಧತಿಯನ್ನು ತಲತಲಾಂತರದಿಂದ ಮಾಡಿಕೊಂಡು ಬಂದಿದ್ದಾರೆ. ಚಾಕುವಿನಿಂದ ಹುತ್ತದ ರಂಧ್ರದ ಬಳಿ ಕೋಳಿಯನ್ನು ತೆಗೆದುಕೊಂಡು ಹೋಗುವ ಮೂಲಕ ಕೋಳಿಯ ಕತ್ತನ್ನು ಕೊಯ್ದು ಅದರ ರಕ್ತವನ್ನು ಅದರ ಮೇಲೆ ಹಾಕುತ್ತಾರೆ.
ಈ ಅಚರಣೆ ವಿಶೇಷ ಕಾರಣ: ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಜನರು ಹಿಂದೆ ಅಡವಿಯಲ್ಲಿ ವಾಸ ಮಾಡ್ತಿದ್ರು. ಆಗ ಜನರಿಗೆ ಹಾವುಗಳು ಹೆಚ್ಚಾಗಿ ಕಚ್ಚಿ ಜನರು ಸಾವನ್ನಪ್ಪುತ್ತಿದ್ದರಂತೆ. ಈ ಬಗ್ಗೆ ಸಮುದಾಯದ ಹಿರಿಯರ ಜೊತೆ ಚರ್ಚಿಸಿ ಈ ಪದ್ಧತಿ ನಡೆಸಿಕೊಂಡು ಬಂದಿದ್ದಾರೆ. ಈ ರೀತಿ ಆಚರಣೆ ಮಾಡಲು ಪ್ರಾರಂಭಿಸಿದಾಗಿನಿಂದ ಹಾವು ಕಚ್ಚುವುದು ಕಡಿಯಾಯ್ತಂತೆ. ಹೀಗಾಗಿ ಅಂದಿನಿಂದ ಇಂದಿನವರೆಗೂ ಈ ಪದ್ಧತಿ ಚಾಲ್ತಿಯಲ್ಲಿದೆ.
ನೋಟಿಸ್ ಬೋರ್ಡ್ ಮೇಲೆ ಹುಡುಗಿಯ ಬೆತ್ತಲೆ ಫೋಟೋ ಅಂಟಿಸಿದ್ದ ರಾಕೇಶ್ ಅಡಿಗ!