newsics.com
ಬೆಂಗಳೂರು: ಅಕ್ಟೋಬರ್’ನಿಂದ 2021-22ನೇ ಸಾಲಿನ ಪದವಿ ತರಗತಿಗಳ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಅಕ್ಟೋಬರ್ ಮೊದಲ ವಾರದಿಂದ ದಾಖಲಾತಿ ಆರಂಭವಾಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಕುಲಪತಿಗಳಿಗೆ ಸೂಚನೆ ನೀಡಿದರು.
ಈ ಬಾರಿ ಪಿಯುಸಿ ಉತ್ತೀರ್ಣರಾದ ಎಲ್ಲರೂ ಸಿಇಟಿ ಬರೆಯಬಹುದು. ಬಿಎಸ್’ಸಿ ಕೋರ್ಸ್ ಗೆ ಸಿಇಟಿ ಅಂಕ ಪರಿಗಣಿಸುವುದಿಲ್ಲ ಎಂದು ಮಾಹಿತಿ ನೀಡಿದರು.
ಈ ವರ್ಷದಿಂದ ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ಶೈಕ್ಷಣಿಕ ನೀತಿ ಅನ್ವಯವಾಗಲಿದ್ದು 4 ವರ್ಷ ಪದವಿ ಆರಂಭವಾಗಲಿದೆ. ಈಗಾಗಲೇ ವಿವಿಧ ಕೋರ್ಸ ಗಳಿಗೆ ಬೇಡಿಕೆ ಹೆಚ್ಚಿದೆ ಎಂದರು.
ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಎಲ್ಲಾ ಕುಲಪತಿಗಳ ಜತೆ ಮಂಗಳವಾರ (ಜೂ.15) ವರ್ಚುವಲ್ ಸಭೆ ನಡೆಸಿದ ಅವರು ಮಾಹಿತಿ ನೀಡಿದರು.
ಮನೆಗೆ ತೆರಳುವಂತೆ ಪಿಜಿಗಳಲ್ಲಿರುವ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಸೂಚನೆ