newsics.com
ಬೆಂಗಳೂರು: ಸೆಪ್ಟೆಂಬರ್ 25 ರಂದು ಕರ್ನಾಟಕ ಬಂದ್ ಇಲ್ಲ, ಬದಲಿಗೆ ಹೆದ್ದಾರಿ ಬಂದ್ ಮಾಡಲು ರೈತರು ಮುಂದಾಗಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಈ ಮಾಹಿತಿ ನೀಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ವಿರೋಧಿ ಧೋರಣೆ ವಿರೋಧಿಸಿ ಸೆ.25 ರಂದು ಕರ್ನಾಟಕ ಬಂದ್ ಮಾಡಲ್ಲ, ಬಂದ್ ಬದಲು ಹೆದ್ದಾರಿ ಮಾತ್ರ ಬಂದ್ ಮಾಡಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಮಸೂಧೆಗಳ ವಿರುದ್ಧ ರೈತರ ಸಂಘಗಳು ಆಕ್ರೋಶ ವ್ಯಕ್ತಪಡಿಸಿವೆ. ಸರ್ಕಾರದ ರೈತವಿರೋಧಿ ಮಸೂಧೆ ವಿರೋಧಿಸಿ, ಇದೇ ಸೆಪ್ಟೆಂಬರ್ 25ರ ಶುಕ್ರವಾರದಂದು ಕರ್ನಾಟಕ ಬಂದ್ ಗೆ ರೈತ ಸಂಘಟನೆಗಳು ಕರೆ ನೀಡಿತ್ತು. ಸೆ.25ರ ಶುಕ್ರವಾರದಂದು ಕರ್ನಾಟಕ ಬಂದ್ ಆಗಲಿದೆ ಎಂದು ಹೇಳಲಾಗುತ್ತಿತ್ತು . ಆದರೆ ಇದೀಗ ಸೆ.25 ರಂದು ಕರ್ನಾಟಕ ಬಂದ್ ಮಾಡುವುದಿಲ್ಲ, ಬಂದ್ ಬದಲು ಹೆದ್ದಾರಿ ಮಾತ್ರ ಬಂದ್ ಮಾಡಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಸೆ.25ರಂದು ಕರ್ನಾಟಕ ಬಂದ್ ಇಲ್ಲ, ಬದಲಿಗೆ ಹೆದ್ದಾರಿ ಬಂದ್
Follow Us