newsics.com
ಬೆಂಗಳೂರು: ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಅಂಗೀಕರಿಸಿದ ದಿನವನ್ನು ಹಿಂದಿ ಭಾಷಾ ದಿವಸವಾಗಿ ಆಚರಿಸಲಾಗುತ್ತಿದೆ. 1949 ಸೆಪ್ಟೆಂಬರ್ 14ರಂದು ಹಿಂದಿಯನ್ನು ಅಧಿಕೃತ ಭಾಷೆಯಾಗಿ ಘೋಷಿಸಲಾಯಿತು. ಇಂದು ಅದರ ವಾರ್ಷಿಕ ದಿನ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಪರ- ವಿರೋಧ ಧ್ವನಿ ಅಭಿವ್ಯಕ್ತಿಗೊಂಡಿದೆ.
ನಟ ಪ್ರಕಾಶ್ ರೈ ಕನ್ನಡವೇ ನನ್ನ ಉಸಿರು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದರ ಜತೆ ಜತೆಗೆ ಅವರು ಟ್ರೋಲ್’ಗೆ ಗುರಿಯಾಗಿದ್ದಾರೆ. ಬಹು ಭಾಷಾ ನಟರಾಗಿರುವ ಪ್ರಕಾಶ್ ರೈ ಅನುಕೂಲಕ್ಕೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳುವವರ ಸಾಲಿನಲ್ಲಿ ಇದ್ದಾರೆ ಎಂಬ ಟೀಕೆ ವ್ಯಾಪಕವಾಗಿದೆ.
ಈ ಮಧ್ಯೆ, ತಮ್ಮ ಕನ್ನಡ ಅಭಿಮಾನ ಪ್ರಶ್ನಿಸಿದವರಿಗೆ ಕ್ರಿಕೆಟಿಗ ವಿಜಯ್ ಆರ್. ಭಾರದ್ವಾಜ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕನ್ನಡದಿಂದ ಜೀವನ ನಡೆಯುತ್ತಿದೆ. ಇನ್ನು ಮುಂದೆ ಟೀಕೆ ಮಾಡಿದರೆ ಅದಕ್ಕೆ ಅವರದ್ದೇ ಭಾಷೆಯಲ್ಲಿ ಉತ್ತರಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.