newsics.com
ಬೆಂಗಳೂರು: ಕರ್ನಾಟಕದಲ್ಲಿ ಪತ್ತೆಯಾದ ಪ್ರತೀ ಕೋವಿಡ್ ಸೋಂಕಿತ ವ್ಯಕ್ತಿ 12 ಮಂದಿಗೆ ಕೊರೋನಾ ಸೋಂಕು ಪ್ರಸರಣ ಮಾಡಿದ್ದಾನೆ ಎಂದು ಸೆರೋ ಸರ್ವೇ ಬಹಿರಂಗಪಡಿಸಿದೆ.
ಎರಡನೇ ಬಾರಿ ಕರ್ನಾಟಕದಲ್ಲಿ ನಡೆದ ಸೆರೋ ಸರ್ವೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ.
ಇದರಲ್ಲಿ ವೃದ್ಧರು, ಸಹವರ್ತಿ ಪರಿಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳು ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ.
ಪ್ರತಿ ಆರ್‌ಟಿ-ಪಿಸಿಆರ್ ದೃಢಪಡಿಸಿದ ಕೋವಿಡ್-ಪಾಸಿಟಿವ್ ರೋಗಿಗೆ, ಕರ್ನಾಟಕದಲ್ಲಿ ಪತ್ತೆಯಾಗುವ ಐಜಿಜಿ (ಆ್ಯಂಟಿಬಾಡಿ) ಮಟ್ಟವನ್ನು ಹೊಂದಿರುವ 12 ಸೋಂಕಿತ ವ್ಯಕ್ತಿಗಳು ಇದ್ದಾರೆ. ಇದನ್ನು ಕೇಸ್ ಟು ಇನ್ಫೆಕ್ಷನ್ ಅನುಪಾತ (CIR) ಎಂದು ಕರೆಯಲಾಗುತ್ತದೆ ಎಂದು ಸೆರೋ ಸರ್ವೇಯಲ್ಲಿ ತಿಳಿದುಬಂದಿದೆ.
ಆನ್ಲೈನ್’ನಲ್ಲಿ ಪಿಜ್ಜಾ ಆರ್ಡರ್ ಮಾಡಿ 84 ಸಾವಿರ ರೂ. ಕಳೆದುಕೊಂಡ ವ್ಯಕ್ತಿ