Saturday, February 27, 2021

ಆನ್ಲೈನ್ ಆಪ್ ಮೂಲಕ ಬಡ್ಡಿ ವ್ಯವಹಾರ: ಮೂವರ ಬಂಧನ

NEWSICS.COM

ಬೆಂಗಳೂರು: ಆನ್ಲೈನ್ ಆಪ್ ಮೂಲಕ ಸಾಲ ನೀಡಿ ಹೆಚ್ಚಿನ ದರದ ಬಡ್ಡಿ ವಿಧಿಸುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಸೈಯದ್ ಅಹ್ಮದ್, ಸೈಯದ್ ಇರ್ಫಾನ್ ಮತ್ತು ಆದಿತ್ಯ ಎಂಬ ಆರೋಪಿಗಳು ಬಂಧನವಾಗಿದ್ದಾರೆ.

ಮನಿ ಡೇ, ಪೈಸಾ ಪೇ, ಲೋನ್ ಟೈಮ್, ರೂಪಿ ಡೇ, ರೂಪಿ ಕಾರ್ಟ್, ಇನ್ ಕ್ಯಾಶ್ ಕಂಪನಿಗಳ ಮೂಲಕ ಸಾಲ ನೀಡಿ, ಶೇ. 36ರಷ್ಟು ಬಡ್ಡಿ ಎಂದು ಕಡಿಮೆ ಹಣ ನೀಡುತ್ತಿದ್ದರು ಎನ್ನಲಾಗಿದೆ. ಬಡ್ಡಿ ಹಣಕ್ಕಾಗಿ ಫೋನ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ‌ಹೇಳಲಾಗಿದೆ. ಕಂಪನಿಯ ಮಾಲೀಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಸಹೋದರಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚೂರಿಯಿಂದ ಇರಿತ

Newsics.com ನವದೆಹಲಿ: ಸಹೋದರಿಗೆ ಕಿರುಕುಳ ನೀಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ 17 ವರ್ಷ ಪ್ರಾಯದ ಹುಡುಗನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಗಂಭೀರ ಹಲ್ಲೆ ನಡೆಸಿದ್ದಾರೆ. ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಈ ಘಟನೆ...

20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕ ಅಮಾನತು

newsics.com ಕೊಚ್ಚಿ: ಕೇರಳದ ದೇವಸ್ಥಾನವೊಂದರಲ್ಲಿ 20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕರೊಬ್ಬರನ್ನು ಅಮಾನತು ಮಾಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿಯ ನೀತಿಗೆ  ವಿರುದ್ದವಾಗಿ ಅರ್ಚಕರು ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕೊಚ್ಚಿ ಸಮೀಪದ ಮಾಚಾಡ್ ತಿರುವಣ್ಣಿಕಾವ್ ದೇವಸ್ಥಾನದಲ್ಲಿ...

ಜಲ್ಲಿಕಟ್ಟು ವೇಳೆ ಅನಾಹುತ: ನಾಲ್ಕು ಮಂದಿ ಸಾವು

newsics.com ಚೆನ್ನೈ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ಮತ್ತೊಮ್ಮೆ ದುರಂತ ಸಂಭವಿಸಿದೆ.ಶಿವಗಂಗಾ ಜಿಲ್ಲೆಯ ಅರಲಿಪಾರಯಿ ಗ್ರಾಮದಲ್ಲಿ ಹೋರಿ ಬೆದರಿಸುವ ವೇಳೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 90ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಸ್ಥಳೀಯ ದೇವಸ್ಥಾನದ ಉತ್ಸವದ ಅಂಗವಾಗಿ...
- Advertisement -
error: Content is protected !!