ಬೆಂಗಳೂರು: ಆಗಸ್ಟ್ 3 ರಂದು ರಕ್ಷಾಬಂಧನ. ಈ ಹಬ್ಬದ ಖುಷಿ ಹೆಚ್ಚಿಸಲು ಅಂಚೆ ಇಲಾಖೆ ಮುಂದಾಗಿದೆ. ಕೊರೋನಾ ಭಯದಲ್ಲಿ ನೀವು ರಾಖಿ ಕೊಳ್ಳಲು ಹೊರಗೂ ಹೋಗಬೇಕಿಲ್ಲ. ಕರ್ನಾಟಕ ಅಂಚೆ ಇಲಾಖೆ ಆನ್ಲೈನ್ ರಾಖಿ ಸೇವೆ ಆರಂಭಿಸಿದೆ.
ಕೊರೋನಾ ವೈರಸ್ ಸೋಂಕಿನ ಭಯದ ಹಿನ್ನೆಲೆಯಲ್ಲಿ ಜನರು ಸುರಕ್ಷಿತವಾಗಿ ರಾಖಿ ಖರೀದಿಸಲು ಮತ್ತು ಅದನ್ನು ಅವರಿಗೆ ತಲುಪಿಸಲು ಅಂಚೆ ಇಲಾಖೆ ಆನ್ ಲೈನ್ ರಾಖಿ ಪೋಸ್ಟ್ ಆರಂಭಿಸಿದೆ.
ಅಂಚೆ ಇಲಾಖೆಯ ವೆಬ್ ಸೈಟ್ ನಲ್ಲಿ ನಿಮಗೆ ಇಷ್ಟವಾದ ರಾಖಿಯನ್ನು ಆಯ್ಕೆ ಮಾಡಿ ನಂತರ ಅದಕ್ಕೆ ಆನ್ ಲೈನ್ ಮೂಲಕವೇ ಹಣ ಪಾವತಿಸಿ ಮನೆಯ ವಿಳಾಸ ನೀಡಿದ್ರೆ ಸಾಕು ಹಬ್ಬದಂದು ರಾಖಿ ಮನೆ ತಲುಪುತ್ತದೆ ಕರ್ನಾಟಕ ಅಂಚೆ ಇಲಾಖೆ ಮಾಹಿತಿ ನೀಡಿದೆ.
ಅಂಚೆ ಇಲಾಖೆಯಿಂದ ಆನ್ಲೈನ್ ರಾಖಿ ಸೇವೆ
Follow Us