newsics.com
ಬೆಂಗಳೂರು: ನಗರದಲ್ಲಿ ಇನ್ನು ಮುಂದೆ ಪಾದಚಾರಿಗಳು ಎಲ್ಲಿ ಬೇಕಾದರೂ ಅಲ್ಲಿ ರಸ್ತೆ ದಾಟುವಂತಿಲ್ಲ. ಈ ರೀತಿ ಅಡ್ಡಾದಿಡ್ಡಿಯಾಗಿ ರಸ್ತೆ ದಾಟಿದರೆ ಜೇಬಿಗೆ ಬೀಳಲಿದೆ ಕತ್ತರಿ.
ಪಾದಚಾರಿಗಳು ಎಲ್ಲಿ ರಸ್ತೆ ದಾಟಬಹುದು ಎಂಬುದನ್ನು ನಿಗದಿಪಡಿಸಲಾಗುತ್ತಿದೆ. ಅಲ್ಲಿ ರಸ್ತೆ ದಾಟಬೇಕು. ಇಲ್ಲದಿದ್ದರೆ ದಂಡ ಪಾವತಿಸಬೇಕು. ಈ ರೀತಿ ಕಾನೂನು ಜಾರಿ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ನಿಯಮ ಉಲ್ಲಂಘಸಿದರೆ 10 ರೂಪಾಯಿ ದಂಡ ಪಾವತಿಸಬೇಕಾಗಿದೆ. ಕಮಾಂಡ್ ಕೇಂದ್ರದಲ್ಲಿ ಜನರ ಚಟುವಟಿಕೆಗಳ ಮೇಲೆ ನಿಗಾ ಇರಿಸಿ ದಂಡ ವಸೂಲಿ ಮಾಡಲು ತೀರ್ಮಾನಿಸಲಾಗಿದೆ