newsics.com
ಮೈಸೂರು: ಸೆ.21ರಂದು ಶಾಲೆಗಳಲ್ಲಿ ತರಗತಿ ಆರಂಭ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಸೆ. 21 ರಿಂದ ಶಾಲೆ ಆರಂಭವಾಗಲಿದೆ. ಆದರೆ ತರಗತಿ ಆರಂಭವಾಗುವುದಿಲ್ಲ. ಸೆ.21ರಿಂದ ಕೇವಲ ಶಾಲೆ ತೆರೆಯಲಿದ್ದು, ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ. ಸೆ.21ರಿಂದ ಶಿಕ್ಷಕರು, ಉಪನ್ಯಾಸಕರು ಕಡ್ಡಾಯವಾಗಿ ಹಾಜರಿರಬೇಕು ಎಂದರು.
ಸೆ.30ರೊಳಗೆ ಪ್ರವೇಶಾತಿ ಪ್ರಕ್ರಿಯೆ ಮುಗಿಸಬೇಕು ಎಂದು ಸೂಚಿಸಲಾಗಿದೆ. ಈ ವೇಳೆ 1 ರಿಂದ 10 ನೇ ತರಗತಿವರೆಗಿನ ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ಒಂದು ಟರ್ಮ್ ಫಿಸ್ ಮಾತ್ರ ಪಡೆಯಬೇಕು ಎಂದು ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಏನಾದರೂ ಸಮಸ್ಯೆ ಉಂಟಾದಲ್ಲಿ ಬಿಇಒ ಅವರನ್ನು ಸಂಪರ್ಕಿಸುವಂತೆ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ 4.0 ಅನ್ಲಾಕ್ ಮಾರ್ಗಸೂಚಿಯಲ್ಲಿ ಸೆ.21 ರಿಂದ 9ರಿಂದ 12ನೇ ತರಗತಿವರೆಗಿನ ಮಕ್ಕಳು ಪೋಷಕರ ಅನುಮತಿ ಪತ್ರದೊಂದಿಗೆ ಶಾಲೆಗೆ ಹಾಜರಾಗಬಹುದು. ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಬಹುದು ಎಂದು ತಿಳಿಸಿತ್ತು. ಆದರೆ, ರಾಜ್ಯದಲ್ಲಿ ಸೆ.21 ರಿಂದ ಶಾಲೆ ಮಾತ್ರ ತೆರೆಯಲಿದ್ದು, ಕೇವಲ ಪ್ರವೇಶ ಪ್ರಕ್ರಿಯೆಯಷ್ಟೇ ನಡೆಯಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಚೀನಾದಲ್ಲಿ ಹೊಸ ವೈರಸ್: ಪುರುಷರನ್ನು ನಪುಂಸಕರನ್ನಾಗಿ ಮಾಡುತ್ತಿದೆ ಸೂಕ್ಷ್ಮ ಜೀವಿ
ರೈಲು ಪ್ರಯಾಣಿಕರು ಇನ್ನು ಮಂದೆ ಪಾವತಿಸಬೇಕು ಬಳಕೆದಾರರ ಶುಲ್ಕ