Monday, April 12, 2021

20 ಲಕ್ಷ ಉಳಿಸಲು ಹೋಗಿ 88 ಲಕ್ಷದ ಬೆಂಜ್ ಕಾರು ಕಳೆದುಕೊಂಡ ಮಾಲೀಕ…!

ಬೆಂಗಳೂರು: ರಸ್ತೆ ತೆರಿಗೆ ಉಳಿಸಲು ಹೋದ ದುಬಾರಿ ಕಾರು ಮಾಲೀಕನೊಬ್ಬ ಇದೀಗ ತನ್ನ ಕಾರನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿ ಕಂಗಾಲಾಗಿದ್ದಾನೆ.
ಬೆಂಗಳೂರಿನ ವ್ಯಕ್ತಿಯೊಬ್ಬರು 2019 ಜೂನ್ ನಲ್ಲಿ 88 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಬೆಂಜ್ ಕಾರು ಖರೀದಿಸಿದ್ದರು. ಆದರೇ ರಸ್ತೆ ಟ್ಯಾಕ್ಸ್ 20 ಲಕ್ಷ ಪಾವತಿಸೋದನ್ನು ತಪ್ಪಿಸಿಕೊಳ್ಳೋದಿಕ್ಕೆ ಆತ ವಂಚನೆಯ ಹಾದಿ ಹಿಡಿದಿದ್ದ.
ತಾತ್ಕಾಲಿಕವಾಗಿ ಆತನಿಗೆ ರಿಜಿಸ್ಟರ್ ನಂಬರ್ ಕೆಎ-05 ಟಿಎಂಪಿ 9861 ನಂಬರ್ ನೀಡಲಾಗಿತ್ತು. ಆದರೇ ಅಧಿಕೃತವಾಗಿ ಪಾವತಿಸಬೇಕಾದ 20 ಲಕ್ಷ ರೂಪಾಯಿ ಪಾವತಿಸದೇ ಆತ ಬೇಕಾಬಿಟ್ಟಿ ಗಾಡಿ ಓಡಿಸುತ್ತಿದ್ದ.
ಹೀಗಾಗಿ ಯಶವಂತಪುರ ಆರ್ ಟಿ ಓ ಅಧಿಕಾರಿಗಳು ಈ ಕಾರನ್ನು ವಶಪಡಿಸಿಕೊಂಡಿದ್ದಾರೆ‌.
ಆತ ಖರೀದಿಸಿದ್ದು ಬಿಎಸ್-೪ ಮಾಡೆಲ್ ಕಾರ್ ಆಗಿದ್ದು, ಈ ಕಾರಿನ ರಿಜಿಸ್ಟರ್ ಕಳೆದ ಏಪ್ರಿಲ್ 30 ರಂದು ಅಂತ್ಯವಾಗಿದೆ.
ಹೀಗಾಗಿ ಈ ಕಾರಿನ ರಜಿಸ್ಟ್ರೇಶನ್ ಗೆ ಈಗ ಅವಕಾಶವಿಲ್ಲದಂತಾಗಿದೆ. ಇದರಿಂದ 88 ಲಕ್ಷ ರೂಪಾಯಿ ಕಾರು ಬಳಕೆಗೆ ಬಾರದಂತಾಗಿದೆ. ಹೀಗಾಗಿ ಕಾರು ಬೇಕಾದರೇ ಕಾರಿನ ಮಾಲೀಕ ಸುಪ್ರೀಂ‌ಕೋರ್ಟ್ ಮೆಟ್ಟಿಲೇರಬೇಕಾದ ಅನಿವಾರ್ಯತೆ ಎದುರಾಗಿದೆ.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!