ಬೆಂಗಳೂರು; ಇತ್ತೀಚೆಗೆ ತುಮಕೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಮಾತನಾಡುವಾಗ ಪಾಕಿಸ್ತಾನದ ವಿರುದ್ಧ ಕಿಡಿಕಾರಿ ದೇಶದ ಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್, ‘ಪಾಕಿಸ್ತಾನ ಒಂದು ಸತ್ತ ಕುದುರೆಯಂತೆ. ಜಮ್ಮು ಕಾಶ್ಮೀರದ ಪೊಲೀಸರನ್ನು ಕಳುಹಿಸಿದರೂ ಅವರು ಪಾಕ್ ಸೇನೆಯನ್ನು ಸೋಲಿಸಬಹುದು.’ ಅಂತಹ ದೇಶದ ವಿಷಯವನ್ನು ಪದೇ ಪದೆ ಪ್ರಸ್ತಾಪಿಸುವ ಮೂಲಕ ಮೋದಿ ಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.