newsics.com
ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಟ್ನಾಗೆ ಶನಿವಾರ ಹೊರಡಬೇಕಿದ್ದ ‘ಗೋ ಏರ್’ ವಿಮಾನ 10 ಗಂಟೆ ತಡವಾದ್ದರಿಂದ, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಗದಿತ ಸಮಯಕ್ಕಿಂತಲೂ ಮುಂಚೆಯೇ ಪ್ರಯಾಣಿಕರು ಬಂದಿದ್ದರು. ಆದರೆ, ನಿಗದಿಯಂತೆ ವಿಮಾನ ಹಾರಾಟ ನಡೆಸಲಿಲ್ಲ. ‘ಗೋ ಏರ್’ ವಿಮಾನ ಕಂಪನಿ ಕೌಂಟರ್ ಎದುರು ಸೇರಿದ್ದ ಪ್ರಯಾಣಿಕರು, ವಿಮಾನ ವಿಳಂಬದ ಬಗ್ಗೆ ವಿಚಾರಿಸಿದರು. ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆಕ್ರೋಶಗೊಂಡ ಪ್ರಯಾಣಿಕರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಪ್ರಯಾಣಿಕರು ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆಸಿದರು. ನಿಲ್ದಾಣದ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿದರೂ ಪ್ರಯಾಣಿಕರು ಸಮಾಧಾನವಾಗಲಿಲ್ಲ.
ಒಂದು ವರ್ಷ ಏರ್ ಇಂಡಿಯಾ ಸಿಬ್ಬಂದಿ ಸೇವೆ ಮುಂದುವರಿಸುವಂತೆ ಟಾಟಾಗೆ ಕೇಂದ್ರ ಸರ್ಕಾರ ಷರತ್ತು
ಕೊರೋನಾ ವ್ಯಾಕ್ಸಿನ್ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ: ಕೇರಳ ಹೈಕೋರ್ಟ್ ನೋಟಿಸ್