ಬೆಂಗಳೂರು: ಅಯೋಧ್ಯೆ ರಾಮಮಂದಿರ ದೇಗುಲ ನಿರ್ಮಾಣದ ಮೇಲುಸ್ತುವಾರಿ ಟ್ರಸ್ಟ್ ಗೆ ವಿಶ್ವಸ್ಥರಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳನ್ನು ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಶ್ರೀರಾಮಜನ್ಮಭೂಮಿ ತೀರ್ಥ ಟ್ರಸ್ಟ್ ಸದಸ್ಯರನ್ನಾಗಿ ಪ್ರಯಾಗದ ಸ್ವಾಮಿ ವಸುದೇವಾನಂದ ಸರಸ್ವತಿ, ಯುಗಪುರುಷ ಪರಮಾನಂದ ಸ್ವಾಮೀಜಿ, ಗೋವಿಂದ ದೇವ್ ಗಿರಿ ಸ್ವಾಮೀಜಿ, ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ, ಮಹಂತ ನಿರ್ಮೋಹಿ ಅಖಾಡ ಅಯೋಧ್ಯಾ, ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರ ಅಯೋಧ್ಯಾ, ಡಾ. ಅನಿಲ್ ಮಿಶ್ರಾ ಅಯೋಧ್ಯಾ, ಕಾಮೇಶ್ವರ್ ಚೌಪಾಲ ಪಟನಾ, ಶ್ರೀ ಕೆ ಪರಾಶರಣ್ , ನವದೆಹಲಿ ಅವರನ್ನು ನೇಮಿಸಲಾಗಿದೆ.
ಅಯೋಧ್ಯೆಯಲ್ಲಿ ದೇಗುಲ ನಿರ್ಮಿಸಲು ಟ್ರಸ್ಟ್ ನಿರ್ಮಿಸಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಸಭೆಗೆ ತಿಳಿಸಿದ್ದರು.