Sunday, October 2, 2022

ಕೆಲ ಹೊತ್ತಿನಲ್ಲೇ ಮಠಕ್ಕೆ ಪೇಜಾವರ ಶ್ರೀ

Follow Us

ಉಡುಪಿ: ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳನ್ನು ಕೆಲ ಹೊತ್ತಿನಲ್ಲಿ ಕೆಎಂಸಿ ಆಸ್ಪತ್ರೆಯಿಂದ ಮಠಕ್ಕೆ ಕರೆದೊಯ್ಯಲು ಸಿದ್ಧತೆ ನಡೆದಿದೆ.
ಪೊಲೀಸ್ ಬಿಗಿಭದ್ರತೆಯಲ್ಲಿ ಕೆಎಂಸಿ ವೈದ್ಯರ ತಂಡ ವೆಂಟಿಲೇಟರ್ ನೆರವಿನೊಂದಿಗೆ ಪೇಜಾವರ ಶ್ರೀಗಳನ್ನು ಅತ್ಯಾಧುನಿಕ ವಿಶೇಷ ಆಂಬ್ಯುಲೆನ್ಸ್ನಲ್ಲಿ ಸ್ಥಳಾಂತರಿಸಲಾಗುವುದು ಎಂದು ಶ್ರೀಗಳ ಆಪ್ತರು ತಿಳಿಸಿದ್ದಾರೆ. ಕೆಎಂಸಿ ಆಸ್ಪತ್ರೆಯಿಂದ ಐದು ಕಿಮೀ ದೂರದಲ್ಲಿರುವ ಪೇಜಾವರ ಮಠಕ್ಕೆ ಕರೆದೊಯ್ಯಲು ಸಿದ್ಧತೆ ಸಾಗಿದೆ.
ಈ ಮಧ್ಯೆ, ಪೇಜಾವರ ಮಠವೂ ಸೇರಿದಂತೆ ಕೃಷ್ಣ ದೇಗುಲ ಸುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೆಎಂಸಿ ಆಸ್ಪತ್ರೆ ಬಳಿಯೂ ಬಿಗಿಭದ್ರತೆ ಮಾಡಲಾಗಿದೆ.
ಮಠದಲ್ಲಿ ನಿತ್ಯವೂ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಆಸ್ಥಾನ ಪೂಜೆ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ನೆರವೇರುತ್ತಿದೆ. ಈ ಪೂಜೆ ನಡೆಯುವ ಸಮೀಪದ ಕೊಠಡಿಯಲ್ಲೇ ಪೇಜಾವರ ಶ್ರೀಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಸೇರಿದಂತೆ ಗಣ್ಯರ ದಂಡೇ ಉಡುಪಿಯಲ್ಲಿದ್ದು, ಗಣ್ಯರೂ ಸೇರಿದಂತೆ ಎಲ್ಲ ಭಕ್ತರಿಗೆ ಪೇಜಾವರ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಳೆದ ಸುಮಾರು ಹತ್ತು ದಿನಗಳಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶ್ವತೀರ್ಥ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಭಾನುವಾರ ಶ್ರೀಗಳನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಬರಲಾಗಿದೆ. ಇದು, ಶ್ರೀಗಳ ಆಸೆ ಕೂಡ ಆಗಿತ್ತು” ಎಂದು ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಶನಿವಾರ ರಾತ್ರಿ ಹೇಳಿದ್ದರು.
ಪೇಜಾವರ ಶ್ರೀ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಉಡುಪಿಯಲ್ಲೇ ತಂಗಿದ್ದು, ಭಾನುವಾರದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಉಡುಪಿಯಲ್ಲೇ ತಂಗಿದ್ದು, ಕ್ಷಣಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ಕೂಡ ಉಡುಪಿಗೆ ದೌಡಾಯಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಪುಟ್ಬಾಲ್ ಪಂದ್ಯದಲ್ಲಿ ಸೋಲು; ರೊಚ್ಚಿಗೆದ್ದ ಅಭಿಮಾನಿಗಳಿಂದ ಗಲಾಟೆ, 127 ಜನರು ಸಾವು

newsics.com ಇಂಡೋನೇಷ್ಯಾ;  ಜಾವಾದ ಕಂಜುರುಹಾನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಬಿಆರ್​​ಐ ಲಿಗಾ 1 ಫುಟ್ಬಾಲ್ ಪಂದ್ಯದ ವೇಳೆ ಈ ಹಿಂಸಾಚಾರ ನಡೆದಿದ್ದು, 127 ಜನ ಸಾವನ್ನಪ್ಪಿದ ಘಟನೆ ನಡೆದಿದೆ. ಫುಟ್ಬಾಲ್​...

ಟ್ರ್ಯಾಕ್ಟರ್ ಪಲ್ಟಿ: 27 ಭಕ್ತರು ಸಾವು, ಹಲವರ ಸ್ಥಿತಿ ಚಿಂತಾಜನಕ, ಮೋದಿ ಸಂತಾಪ

newsics.com ಲಖನೌ(ಉತ್ತರ ಪ್ರದೇಶ): ಕಾನ್ಪುರ ಬಳಿ‌ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ 11 ಮಕ್ಕಳು ಹಾಗೂ 11 ಮಹಿಳೆಯರು ಸೇರಿ 27 ಭಕ್ತರು ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ...

ಹಿರಿಯ ಪ್ರಕಾಶಕ ಟಿ.ಎಸ್. ಛಾಯಾಪತಿ‌ ಇನ್ನಿಲ್ಲ

newsics.com ಬೆಂಗಳೂರು: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಪ್ರಕಾಶಕ, ಕನ್ನಡದ ಹಿರಿಯ ಪ್ರಕಾಶಕ ಟಿ.ಎಸ್.ಛಾಯಾಪತಿ(78) ಶನಿವಾರ ನಿಧನರಾದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಛಾಯಾಪತಿ ಅವರಿಗೆ ಪತ್ನಿ ಪುಷ್ಪಾ, ಓರ್ವ ಮಗ ಮತ್ತು ಮಗಳು ಪ್ರತಿಭಾ ಇದ್ದಾರೆ....
- Advertisement -
error: Content is protected !!