Tuesday, July 5, 2022

ಸ್ಥಳೀಯ‌ ನಿರ್ಮಿತ ಮೆಟ್ರೋ ಕೋಚ್ ಬಳಕೆಗೆ ಅನುಮತಿ, ಶೀಘ್ರದಲ್ಲೇ ಸಂಚಾರ ಆರಂಭ

Follow Us

newsics.com
ಬೆಂಗಳೂರು: ಸ್ಥಳೀಯ ನಿರ್ಮಿತ ಮೊದಲ ಮೆಟ್ರೋ ಕೋಚ್ ಬಳಕೆಗೆ ರೈಲ್ವೆ ಮಂಡಳಿಯಿಂದ ಅನುಮತಿ ಸಿಕ್ಕಿದ್ದು. ಶೀಘ್ರದಲ್ಲೇ ಹಳಿ ಮೇಲೆ ಇಳಿಯಲಿವೆ.
BEML ಸಿದ್ಧಪಡಿಸಿದ 42 ಕೋಚ್‌ಗಳೊಂದಿಗೆ ಏಳು ಹೊಚ್ಚ ಹೊಸ ರೈಲುಗಳು ಬೆಂಗಳೂರಿನ ಪೀಣ್ಯದಲ್ಲಿ ನಿಂತಿವೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಈಗ ತಲಾ ಆರು ಕಾರುಗಳೊಂದಿಗೆ 57 ರೈಲುಗಳ ಸಮೂಹವನ್ನು ಹೊಂದಿದೆ. ಅವುಗಳನ್ನು ವರ್ಷಾಂತ್ಯದ ವೇಳೆಗೆ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಹಾಗೂ ಕೆಂಗೇರಿ ಮತ್ತು ಚಲ್ಲಘಟ್ಟ ನಡುವೆ ಮಾರ್ಗದಲ್ಲಿ ಬಳಸುವುದಾಗಿ ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ.
ಕೋಚ್‌ಗಳನ್ನು ಗರಿಷ್ಠ 80 ಕಿಮೀ ವೇಗದಲ್ಲಿ ಓಡಿಸಲು ಅನುಮತಿ ನೀಡಲಾಗಿದೆ. ಇವು ನೇರಳೆ ಮತ್ತು ಹಸಿರು ಕಾರಿಡಾರ್‌ಗಳಲ್ಲಿ ಬಳಕೆಯಾಗಲಿವೆ.
ನಮ್ಮ ಹಿಂದಿನ ರೈಲುಗಳಲ್ಲಿ ಹ್ಯುಂಡೈ ROTEM ನಿಂದ ಬೋಗಿಯನ್ನು ಸಿದ್ಧಪಡಿಸಿದ್ದರೆ, ಇತ್ತೀಚಿನ ಕೋಚ್‌ಗಳನ್ನು BEML ಮತ್ತು ಕೆಲವರು ಒಟ್ಟಾಗಿ ತಯಾರಿಸಿದ್ದಾರೆ. ಈ ಕೋಚ್‌ಗಳಲ್ಲಿ ಕನಿಷ್ಠ 65 ಪ್ರತಿಶತ ಭಾಗಗಳು ಭಾರತದಲ್ಲಿ ತಯಾರಿಸಲಾಗಿದೆ.
ಪ್ರತಿ ಕೋಚ್‌ಗೆ 8.5 ಕೋಟಿ ರೂಪಾಯಿ ಖರ್ಚಾಗಿದೆ ಎಂದು‌ ಮೆಟ್ರೋ ಮೂಲಗಳು ತಿಳಿಸಿವೆ.

ಸ್ಪೈಸ್‌ಜೆಟ್ ವಿಮಾನ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ದೂರು

ಎರಡನೇ ಬಾರಿಯೂ ಪ್ರಧಾನಿ‌ ಮೋದಿ ಭೇಟಿ ತಪ್ಪಿಸಿಕೊಂಡ ತೆಲಂಗಾಣ ಸಿಎಂ

ಮಹಿಳೆಯರ ಟಿ 20 ಚಾಲೆಂಜ್ನಲ್ಲಿ ಮಾಯಾ ವಿಚಿತ್ರ ಬೌಲಿಂಗ್ : ವಿಡಿಯೋ ವೈರಲ್

ಮತ್ತಷ್ಟು ಸುದ್ದಿಗಳು

vertical

Latest News

ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಸ್ಪೈಸ್ ಜೆಟ್

newsics.com ನವದೆಹಲಿ:  ದೆಹಲಿಯಿಂದ  ದುಬೈಗೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷದ ಕಾರಣ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ  ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ...

ಚಾಕು ಇರಿದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ...

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರ ಶೇಖರ್ ಗುರೂಜಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.  ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ  ಕೊಲೆ ಮಾಡಲಾಗಿದೆ ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಂದ್ರಶೇಖರ್ ಗುರೂಜಿ ಅವರನ್ನು ಚಾಕುವಿನಿಂದ...
- Advertisement -
error: Content is protected !!