ಬೆಂಗಳೂರು: ಜಿಂಕೆಗೆ ಬೈಕೊಂದು ಡಿಕ್ಕಿಯಾದ ಪರಿಣಾಮ ಸವಾರ ಮತ್ತು ಜಿಂಕೆ ಮೃತಪಟ್ಟಿರುವ ಘಟನೆ ನೆಲಮಂಗಲ ತಾಲೂಕಿನ ಅಪ್ಪಗೊಂಡನಹಳ್ಳಿ ಬಳಿ ಮಂಗಳವಾರ ನಸುಕಿನ ಜಾವ ನಡೆದಿದೆ.
21 ವರ್ಷದ ಹರೀಶ್ ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ತನ್ನ ಸಹೋದರಿಯನ್ನು ಬಸ್ಸಿಗೆ ಬಿಟ್ಟು ತೆರಳುತ್ತಿದ್ದ ವೇಳೆ ಏಕಾಏಕಿ ಜಿಂಕೆಯೊಂದು ಅಡ್ಡ ಬಂದ ಪರಿಣಾಮ ಹರೀಶ್ ನಿಯಂತ್ರಣ ತಪ್ಪಿ ಅದಕ್ಕೆ ಗುದ್ದಿದ್ದಾನೆ. ಘಟನೆಯಲ್ಲಿ ಹರೀಶ್ ತಲೆಗೆ ತೀವ್ರ ಪೆಟ್ಟಾಗಿದ್ದು, ಆತ ಮೃತಪಟ್ಟಿದ್ದಾನೆ. ಇನ್ನೊಂದೆಡೆ ಅಪಘಾತದಲ್ಲಿ ಗಾಯಗೊಂಡಿದ್ದ ಜಿಂಕೆಯೂ ಸಾವಿಗೀಡಾಗಿದೆ.
ಜಿಂಕೆಗೆ ಬೈಕ್ ಡಿಕ್ಕಿ: ಸವಾರ, ಜಿಂಕೆ ಸಾವು
Follow Us