newsics.com
ಬೆಂಗಳೂರು/ ಮೈಸೂರು: ವ್ಯಾಸಂಗಕ್ಕೆ ಅನುಕೂಲವಾಗಲೆಂದು ರಚಿಸಿದ ವಿದ್ಯಾರ್ಥಿಗಳ ಟೆಲಿಗ್ರಾಮ್ ಗ್ರೂಪ್ ವಿದ್ಯಾರ್ಥಿನಿಯರಿಗೆ ತೊಂದರೆ ಸೃಷ್ಟಿಸಿದೆ. ವೈಯಕ್ತಿಕ ಮೆಸೇಜ್’ಗಳ ತಾಣವಾಗಿದೆ.
ಇದು ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು) ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೂಪಿಸಿರುವ ಟೆಲಿಗ್ರಾಮ್ ಗ್ರೂಪ್.
ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಎಸ್ಒಯು ಟೆಲಿಗ್ರಾಂನಲ್ಲಿ ಗ್ರೂಪ್ ಸೃಷ್ಟಿಸಿದೆ. ಅಧ್ಯಯನ ಸಂಬಂಧಿತ ನೋಟ್ಸ್ ಮತ್ತು ಹೊಸ ಸುತ್ತೋಲೆಗಳಿದ್ದಲ್ಲಿ ಅದರಲ್ಲಿ ಅಪ್ಲೋಡ್ ಮಾಡುತ್ತದೆ.
ಆದರೆ, ಈ ಗ್ರೂಪ್ನಲ್ಲಿರುವ ವಿದ್ಯಾರ್ಥಿಗಳು ಗ್ರೂಪ್ನಲ್ಲಿರುವ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಸಂದೇಶ ಕಳುಹಿಸುತ್ತಿದ್ದಾರೆ. ಗುಡ್ ಮಾರ್ನಿಂಗ್, ಗುಡ್ ನೈಟ್ ಮತ್ತು ಹಬ್ಬದ ಶುಭಾಶಯ ಹೇಳುತ್ತಿದ್ದಾರೆ. ನಾವಿಬ್ಬರೂ ಸ್ನೇಹಿತರಾಗೋಣವೇ..? ಎಂದೆಲ್ಲಾ ಕೇಳುತ್ತಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿನಿಯರು ಕೆಎಸ್ಒಯುಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮೆಸೇಜ್ನಲ್ಲಿ ನೀಡಲಾಗಿರುವ ಸೆಕ್ಯೂರಿಟಿ ಸೆಟಿಂಗ್ಸ್ ಬದಲು ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ರೀತಿ ಮಾಡುವುದರಿಂದ ಬೇರೊಬ್ಬರಿಗೆ ನಂಬರ್ ಕಾಣುವುದಿಲ್ಲ. ಅಲ್ಲದೆ, ಮೆಸೇಜ್ ಮಾಡುವುದಕ್ಕೂ ಆಗುವುದಿಲ್ಲ ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗ್ರೂಪ್ ಮಾಡಲಾಗಿದೆ. ಸಮಸ್ಯೆ ಇದ್ದರೆ, ಗ್ರೂಪ್ ನಿಂದ ಲೆಫ್ಟ್ ಆಗಿ ವೆಬ್ಸೈಟ್ ನೋಡುವುದು ಉತ್ತಮ. ಇದರಲ್ಲಿ ಎಲ್ಲ ಮಾಹಿತಿಯೂ ಲಭ್ಯವಿರುತ್ತದೆ ಎಂದು ಕೆಎಸ್ಒಯು ಕುಲಪತಿ ಎಸ್.ವಿದ್ಯಾಶಂಕರ್ ಹೇಳಿದ್ದಾರೆ.
ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ: 9 ಹಿರಿಯ ವಿದ್ಯಾರ್ಥಿಗಳ ಬಂಧನ
ಮಾನಸಿಕ ಒತ್ತಡ; ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಮಂಗಳೂರಲ್ಲಿ ‘ಪ್ಲಾಸ್ಟಿಕ್ ಪಾರ್ಕ್’