newsics.com
ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪರ್ವ ಮುಂದುವರೆದಿದೆ.
ಇಂದೂ ಕೂಡ 35 ಪೈಸೆ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಹೆಚ್ಚುತ್ತಿದೆ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 108.80 ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 99.63 ರೂ. ಆಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ 105.14ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 93.87 ರೂ. ಆಗಿದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 111.09ರೂ. ತಲುಪಿದ್ದು, ಡೀಸೆಲ್ ಲೀಟರ್ ಗೆ 101.78 ರೂ. ಆಗಿದೆ.