ಹುಬ್ಬಳ್ಳಿ: ಇಲ್ಲಿನ ಕಿಮ್ಸ್’ನಲ್ಲಿ 13 ಕೊರೋನಾ ಸೋಂಕಿತರಿಗೆ ನೀಡಿದ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾಗಿದೆ.
ರಾಜ್ಯದಲ್ಲಿ ಕೊರೋನಾ ಆತಂಕದ ನಡುವೆ ಇದೊಂದು ನೆಮ್ಮದಿಯ ವಿಷಯ. ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ 13 ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದ್ದು, 13 ಜನರು ಇದೀಗ ಕೊರೋನಾದಿಂದ ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿಯೇ ಅತೀ ಹೆಚ್ಚು ಮಂದಿಗೆ ಯಶಸ್ವಿ ಪ್ಲಾಸ್ಮಾ ಥೆರಪಿ ನೀಡಿದ ಕೀರ್ತಿಗೆ ಕಿಮ್ಸ್ ಪಾತ್ರವಾಗಿದೆ. ಬೆಂಗಳೂರಿನ ಮೆಡಿಕಲ್ ಕಾಲೇಜು ಅಂಡ್ ರಿಸರ್ಚ್ ಇನ್ನ್ಸಿಟ್ಯೂಟ್ ನಲ್ಲಿ 8 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡಿದ್ದು, ಐವರು ಗುಣಮುಖರಾಗಿದ್ದಾರೆ.
ಒಂದೇ ಪೊಲೀಸ್ ಠಾಣೆಯ 11 ಪೊಲೀಸರಿಗೆ ಕೊರೋನಾ ಸೋಂಕು