newsics.com
ಶಿರಸಿ: ಕ್ಲಾಬ್ ಹೌಸ್ ಆ್ಯಪ್ನಿಂದ ಪರಿಚಯವಾದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇರೆಗೆ ಪೊಲೀಸರು ಯುವಕನನ್ನು ಬಂಧಿಸಿರುವ ಘಟನೆ ಕಾರವಾರ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಶಾಂತ ಭಟ್ ಮಾಣಿಲ ಬಂಧಿತ ಆರೋಪಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆರ್ಲಪದವು ಮೂಲದ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ.
ಮಹಿಳೆಯನ್ನು ಭೇಟಿಯಾಗಲು 2023ರ ಜನವರಿಯಲ್ಲಿ ಖಾಸಗಿ ಲಾಡ್ಜ್ವೊಂದಕ್ಕೆ ಕರೆಯಿಸಿಕೊಂಡಿದ್ದನಂತೆ. ಅಲ್ಲಿಯೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದನಂತೆ. ಖಾಸಗಿ ಕ್ಷಣಗಳ ಫೋಟೋ ಹಾಗೂ ವಿಡಿಯೋ ಮಾಡಿಕೊಂಡಿದ್ದನಂತೆ. ಮಹಿಳೆಗೆ ಫೋಟೋ, ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದನಂತೆ. 25 ಸಾವಿರಕ್ಕೆ ಬೇಡಿಕೆ ಇಟ್ಟು ಬಳಿಕ ಹಂತ ಹಂತವಾಗಿ 7 ಲಕ್ಷ ರೂಪಾಯಿವರೆಗೂ ಹಣ ಪೀಕಿದ್ದ ಎಂದು ಆರೋಪಿಸಿ ಮಹಿಳೆ ದೂರು ದಾಖಲಗಿದ್ದು, ಆರೋಪಿಯನ್ನು ಬಂದಿಸಲಾಗಿದೆ.