ಬೆಂಗಳೂರು: ನಗರದಲ್ಲಿ ಮಂಗವಾರದಿಂದ ಒಂದು ವಾರ ಲಾಕ್ ಡೌನ್ ಜಾರಿಯಾಗಿದ್ದು, ಈ ಸಮಯದಲ್ಲಿ ಪೊಲೀಸರಿಗೆ ನೆರವಾಗಬಯಸುವ ಜನರು ಸಿವಿಲ್ ವಾರ್ಡನ್ ಆಗಿ ಕೆಲಸ ಮಾಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಭಾಸ್ಕರ್ ರಾವ್ ಅವಕಾಶ ಕಲ್ಪಿಸಿದ್ದಾರೆ.
ಈ ಕುರಿತು ಮಂಗಳವಾರ ಭಾಸ್ಕರರಾವ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಬೆಂಗಳೂರು ನಗರದ 18 ರಿಂದ 45 ವರ್ಷದೊಳಗಿನ ಪುರುಷ, ಮಹಿಳೆಯರು ಸಿವಿಲ್ ವಾರ್ಡನ್ ಆಗಲು ಹೆಸರು ನೋಂದಾಯಿಸಬಹುದಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ ಬೆಳಗ್ಗೆ 5ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಅಂಗಡಿ ಓಪನ್!
ದೈಹಿಕವಾಗಿ ಸಮರ್ಥವಾಗಿರುವ ಮತ್ತು ಸೇವಾ ಮನೋಭಾವ ಹೊಂದಿರುವ ಬೆಂಗಳೂರಿನ ಜನರು ಸಿವಿಲ್ ವಾರ್ಡನ್ ಆಗುವ ಮೂಲಕ ಸ್ಥಳೀಯ ಪೊಲೀಸರಿಗೆ ಸಹಾಯ ಮಾಡಬಹುದು.
ಹತ್ತೇ ದಿನದಲ್ಲಿ ಬೆಂಗಳೂರು ತೊರೆದ 7.5 ಲಕ್ಷ ಜನ!
ಸಿವಿಲ್ ವಾರ್ಡನ್ ಆಗುವ ಜನರು ಕೊರೋನಾ ಹರಡದಂತೆ ಇರುವ ಮಾರ್ಗಸೂಚಿಗಳನ್ನು ಜನರು ಪಾಲನೆ ಮಾಡಲು ಸ್ಥಳೀಯ ಪೊಲೀಸರಿಗೆ ನೆರವು ನೀಡಬೇಕಿದೆ. ಆಸಕ್ತರು http://bcp.gov.in ವೆಬ್ ಸೈಟ್ಗೆ ಭೇಟಿ ನೀಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.