ಬೆಂಗಳೂರು: ನಗರದ ಚರ್ಚ್ ಸ್ಟ್ರೀಟ್ ನಲ್ಲಿರುವ ಗೋಡೆ, ಅಂಗಡಿಗಳ ಶಟರ್ ಮೇಲೆ ಸ್ಪ್ರೇ ಪೇಂಟ್ ಬಳಸಿ ಬರೆಯಲಾಗಿದ್ದ ‘ಫ್ರೀ ಕಾಶ್ಮೀರ’ ಎಂಬ ಬರಹವನ್ನು ಪೊಲೀಸರು ಅಳಿಸಿಹಾಕಿದ್ದಾರೆ .
ಜನರಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಕಿಚ್ಚು ಇನ್ನಷ್ಟು ಪಸರಿಸದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕಬ್ಬನ್ ಪಾರ್ಕ್ ಪೊಲೀಸರು ಕಪ್ಪು ಬಣ್ಣದಿಂದ ಬರಹಗಳನ್ನು ಅಳಿಸಿ ಹಾಕಿದ್ದಾರೆ.
ನಸುಕಿನ ಜಾವ 3ರ ಸುಮಾರಿಗೆ ಇಬ್ಬರು ಕಿಡಿಗೇಡಿಗಳು ಚರ್ಚ್ ಸ್ಟ್ರೀಟ್ ನ ಗೋಡೆ, ಶೇಟರ್ ಗಳ ಮೇಲೆ ಫ್ರೀ ಕಾಶ್ಮೀರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಲ ಬರಹಗಳನ್ನು ಬರೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.