newsics.com
ಬೆಂಗಳೂರು: ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ನಟ ಜಗ್ಗೇಶ್ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಮಲ್ಲೇಶ್ವರಂ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ದರ್ಶನ್ ಅವರನ್ನುಜಗ್ಗೇಶ್ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನ ಮಾಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದ್ದಾರೆ.
ಸೋಮವಾರ ಮೈಸೂರು ಸಮೀಪದ ಅತ್ತಳ್ಳಿ ಗ್ರಾಮದಲ್ಲಿ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡ ಗುಂಪೊಂದು ಜಗ್ಗೇಶ್ ಅವರ ಚಿತ್ರದ ಚಿತ್ರೀಕರಣಕ್ಕೆ ಅಡ್ಡಿ ಪಡಿಸಿತ್ತು. ಕ್ಷಮೆಯಾಚಿಸುವಂತೆ ಪಟ್ಟುಹಿಡಿದಿತ್ತು.
ಇದೇ ವೇಳೆ ತಾನು ಯಾರನ್ನು ಅವಮಾನ ಮಾಡಿಲ್ಲ ಎಂದು ಜಗ್ಗೇಶ್ ಪುನರುಚ್ಚರಿಸಿದ್ದಾರೆ.