Wednesday, November 30, 2022

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

Follow Us

newsics.com

ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ.

ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ.

ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ ಬುಧವಾರ ನಡೆಯಲಿದ್ದು, ನೂರು ಕೆಜಿಗೂ ಹೆಚ್ಚು ತೂಕದ ಈ ಪಂಚಲೋಹ ಮೂರ್ತಿಯನ್ನು ಶೃಂಗೇರಿ ಮಠದ ಜಗದ್ಗುರುಗಳು ಹಸ್ತಾಂತರಿಸಲಿದ್ದಾರೆ.
ಕಾಶ್ಮೀರದ ಸೇವ್ ಶಾರದಾ ಸಮಿತಿಯವರು ಶೃಂಗೇರಿಯಲ್ಲಿ ಈ ಪಂಚಲೋಹ ವಿಗ್ರಹ ಪಡೆಯಲಿದ್ದಾರೆ. ಉಭಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶಾರದಾ ದೇವಿಯ ವಿಗ್ರಹ ಹಸ್ತಾಂತರ ಕಾರ್ಯ ನಡೆಯಲಿದೆ.

ಸಮಿತಿ ಮುಖ್ಯಸ್ಥ ರವೀಂದ್ರ ಪಂಡಿತ ಮಾತನಾಡಿ, ಸಮಿತಿಯ 12 ಮಂದಿ ಶೃಂಗೇರಿಯಲ್ಲಿ ಬುಧವಾರ ಪಂಚಲೋಹ ಮೂರ್ತಿ ಪಡೆಯುತ್ತೇವೆ. ಕಾಶ್ಮೀರದಲ್ಲಿ ದೇಗುಲ ನಿರ್ಮಾಣ ಕಾರ್ಯ ಪೂರ್ಣ ಮುಗಿದಿಲ್ಲ. ಹೀಗಾಗಿ ಸದ್ಯಕ್ಕೆ ಮೂರ್ತಿಯನ್ನು ಶೃಂಗೇರಿ ಅಥವಾ ಬೆಂಗಳೂರಿನಲ್ಲಿಯೇ ಇಡುತ್ತೇವೆ ಎಂದು ತಿಳಿಸಿದ್ದಾರೆ.

ದೇಗುಲ ನಿರ್ಮಾಣಕ್ಕೆ ಸುಮಾರು 1.5 ಕೋಟಿ ವೆಚ್ಚವಾಗಲಿದ್ದು, ಗರ್ಭಗುಡಿ 12X12 ವಿಸ್ತೀರ್ಣವಿದೆ. ದೇಗುಲಕ್ಕೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳು ಇರಲಿವೆ. ಚಾವಣಿ, ನೆಲ ಹಾಸು, ಅಲಂಕಾರ ಕಾಮಗಾರಿಗಳು ಬಾಕಿ ಇವೆ ಎಂದು ರವೀಂದ್ರ ಪಂಡಿತ್ ತಿಳಿಸಿದರು.

2021ರ ಡಿಸೆಂಬರ್ 2ರಂದು ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದ್ದು 2023ರ ನವರಾತ್ರಿಗೆ ಉದ್ಘಾಟನೆ ನೆರವೇರಿಸಲು ಸಿದ್ಧತೆ ನಡೆದಿದೆ ಎಂದರು.

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!