newsics.com
ಬೆಂಗಳೂರು: ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಪಂಜ ನೇಮಕಗೊಂಡಿದ್ದಾರೆ.
ನವೆಂಬರ್ 2021ರಿಂದ ಅನ್ವಯವಾಗುವಂತೆ ಮೂರು ವರ್ಷಗಳ ಅವಧಿಗೆ ನೇಮಕಮಾಡಿ ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದಿಸಿದೆ.
ಕರ್ಣಾಟಕ ಬ್ಯಾಂಕಿನ ಸ್ವತಂತ್ರ ನಿರ್ದೇಶಕರಾಗಿದ್ದ ಪ್ರದೀಪ್ ಕುಮಾರ್ ಪಂಜ ಅವರನ್ನು ಅರೆಕಾಲಿಕ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಬ್ಯಾಂಕಿನ ಪ್ರಸಕ್ತ ಅಧ್ಯಕ್ಷ ಜಯರಾಮ ಭಟ್ ಅವರ ಅಧಿಕಾರಾವಧಿ ನವೆಂಬರ್ 13ಕ್ಕೆ ಅಂತ್ಯವಾಗಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿ(ಕಾರ್ಪೋರೇಟ್ ಬ್ಯಾಂಕಿಂಗ್) ಪ್ರದೀಪ್ ಕುಮಾರ್ ನಿವೃತ್ತರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಂಜ ಗ್ರಾಮದ ಪ್ರದೀಪ್ ಕುಮಾರ್ ಕರ್ಣಾಟಕ ಬ್ಯಾಂಕ್ನಲ್ಲಿ 2020ರ ಆಗಸ್ಟ್ 19ರಿಂದ ನಿರ್ದೇಶಕರಾಗಿದ್ದಾರೆ.