Wednesday, October 5, 2022

ಪ್ರಿ ವೆಡ್ಡಿಂಗ್ ಫೋಟೊಶೂಟ್; ತೆಪ್ಪ ಮುಳುಗಿ ವಧು, ವರ ಸಾವು

Follow Us

newsics.com
ಟಿ. ನರಸೀಪುರ (ಮೈಸೂರು): ಕಾವೇರಿ ನದಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೊ ಶೂಟ್‌ ಮಾಡುವ ವೇಳೆ ತೆಪ್ಪ ಮುಳುಗಿ ವಧು, ವರ ಜಲಸಮಾಧಿಯಾಗಿದ್ದಾರೆ.
ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ತಲಕಾಡು ಬಳಿ ಈ ದುರಂತ ಸಂಭವಿಸಿದೆ. ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು (28), ಶಶಿಕಲಾ (20) ಮೃತರು. ನ.22ರಂದು ವಿವಾಹ ನಿಶ್ಚಯವಾಗಿತ್ತು. ತಿ.ನರಸೀಪುರ ತಾಲೂಕಿನ ಮುಡುಕುತೊರೆ ಬಳಿ ಪ್ರಿ ವೆಡ್ಡಿಂಗ್ ಫೋಟೊಶೂಟ್ ಮಾಡುತ್ತಿದ್ದರು. ಕಾವೇರಿ ನದಿ ಮಧ್ಯೆ ಫೋಟೋ ತೆಗೆಸಿಕೊಳ್ಳಲು ಯೋಜನೆ ಹಾಕಿದ್ದರು. ಮದುವೆ ಹುಡುಗ, ಹುಡುಗಿಗೆ ಒಂದು ತೆಪ್ಪ ಹಾಗೂ ಫೋಟೋಗ್ರಾಫರ್, ಸಂಬಂಧಿಕರು ಮತ್ತೊಂದು ತೆಪ್ಪದಲ್ಲಿ ಕಾವೇರಿ ನದಿಯಲ್ಲಿ ಫೋಟೊಶೂಟ್ ಮಾಡುತ್ತಿದ್ದರು. ಹರಿಯುವ ನೀರಲ್ಲಿ ತೆಪ್ಪದ ಮೇಲೆ ನಿಂತು ಕ್ಯಾಮರಾಗೆ ಪೋಸ್​ ಕೊಡುವ ವೇಳೆಗೆ ತೆಪ್ಪ ಮಗುಚಿದ್ದು ಚಂದ್ರು, ಶಶಿಕಲಾ ನೀರಿನಲ್ಲಿ ಮುಳುಗಿದ್ದಾರೆ.

ಪ್ರಿ ವೆಡ್ಡಿಂಗ್ ಶೂಟ್ ದುರಂತಕ್ಕೆ ಹೈಹೀಲ್ಡ್ ಚಪ್ಪಲಿ ಕಾರಣವಂತೆ…!

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ದುರಂತ; 6 ಮಂದಿ ವಿರುದ್ಧ ಕೇಸ್

ನಟಿ ದೀಪಿಕಾ ಕಾಮಯ್ಯ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್

ಮತ್ತಷ್ಟು ಸುದ್ದಿಗಳು

vertical

Latest News

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು....

ದೇಶದ ಶೇ.90ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ವಿಫಲ: ಬಿಲಿಯನೇರ್ ಆನಂದ್ ಮಹೀಂದ್ರ

newsics.com ನವದೆಹಲಿ: ದೇಶದ ಶೇ.90ರಷ್ಟು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದು ಬಿಲಿಯನೇರ್ ಆನಂದ್ ಮಹೀಂದ್ರ ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 90% ಕ್ಕಿಂತ ಹೆಚ್ಚು ವಿಫಲವಾಗಿವೆ. ಒಂದು-ಆಫ್ ಸನ್ನಿವೇಶಗಳಿಂದಾಗಿ...

ಭೀಕರ ಅಪಘಾತ- 10 ಮಂದಿ ಸಾವು, 7 ಮಂದಿಗೆ ಗಾಯ

newsics.com ವಡೋದರ: ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಗುಜರಾತ್‌ನ ವಡೋದರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ತ್ರಿಚಕ್ರ ವಾಹನವೊಂದಕ್ಕೆ ಕಂಟೈನರ್‌ ಟ್ರಕ್‌ ಡಿಕ್ಕಿ ಹೊಡೆದಿದೆ....
- Advertisement -
error: Content is protected !!