Thursday, May 26, 2022

ದಯಾನಂದ್, ಹಿತೇಂದ್ರ, ರವಿಕಾಂತೇಗೌಡ ಸೇರಿ ರಾಜ್ಯದ 21 ಪೊಲೀಸರಿಗೆ ರಾಷ್ಟ್ರಪತಿ ಪದಕ

Follow Us

newsics.com

ಬೆಂಗಳೂರು: ಗಣರಾಜ್ಯೋತ್ಸವದಂದು ನೀಡಲಾಗುವ 2022ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 21 ಪೊಲೀಸರು ಭಾಜನರಾಗಿದ್ದಾರೆ.

ಪೊಲೀಸ್ ಇಲಾಖೆಯ ಪ್ರಕಟಣೆ ಈ‌ ಮಾಹಿತಿ ನೀಡಿದ್ದು, ಗುಪ್ತಚರ ಇಲಾಖೆಯ ಎ.ಡಿ.ಜಿ.ಪಿ ಬಿ.ದಯಾನಂದ್, ಕ್ರೈಂ & ಟೆಕ್ನಿಕಲ್ ಸರ್ವಿಸ್ ಎಡಿಜಿಪಿ ಆರ್.ಹಿತೇಂದ್ರ, ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ, ಕೆ.ಎಸ್.ಆರ್.ಪಿ 5ನೇಯ ಬೆಟಾಲಿಯನ್ ಕಮಾಂಡೆಂಟ್ ರಾಮಯ್ಯ ಜನಾರ್ಧನ್, ಹಲಸೂರು ಉಪವಿಭಾಗ ಎ.ಸಿ.ಪಿ ಡಿ.ಕುಮಾರ್, ಹುಣಸೂರು ಉಪವಿಭಾಗದ ಡಿ.ಎಸ್.ಪಿ ಪ್ರಭುದೇವ್ ರವಿಪ್ರಸಾದ್ ಅವರಿಗೆ ಪದಕ ಲಭಿಸಿದೆ.
ಸಿಂಧನೂರು ಡಿ.ಎಸ್.ಪಿ ವೆಂಕಟಪ್ಪ ನಾಯಕ‌ ಓಲೇಕರ್, ಆನೇಕಲ್ ಉಪವಿಭಾಗದ ಡಿ.ಎಸ್.ಪಿ, .ಎಂ ಮಲ್ಲೇಶಯ್ಯ, ಸಿ.ಐ. ಡಿ ಸೈಬರ್ ಕ್ರೈಂ ಯಶವಂತಕುಮಾರ್, ಕಲಬುರಗಿ ಸಿ.ಸಿ.ಆರ್.ಬಿ ಎ.ಸಿ.ಪಿ ಗಂಗಾಧರ್ ಮಠಪತಿ, ಕರ್ನಾಟಕ ಲೋಕಾಯುಕ್ತದ ಡಿ.ಎಸ್.ಪಿ ಕೆ.ಎಂ.ರಮೇಶ್, ಸಿ.ಐ.ಡಿ ಡಿ.ಎಸ್.ಪಿ ಎಸ್. ಬಿ.ಕೆಂಪಯ್ಯ, ಲೋಕಾಯುಕ್ತ ಇನ್ಸ್ಪೆಕ್ಟರ್ ಎಸ್ ಕೃಷ್ಣಮೂರ್ತಿ, ಬೆಂಗಳೂರಿನ ಕೆಎಸ್ ಆರ್ ಪಿ 1ನೇ ಬೆಟಾಲಿಯನ್ ನ ಸಿ ಎಸ್ ಸಿಂಪಿ, ಬೆಳಗಾವಿ ಡಿ.ಎ.ಆರ್. ಎ.ಆರ್.ಎಸ್ ಐ ಮಹಮ್ಮದ್ ಹನೀಫ್, ಬೆಂಗಳೂರು ಸಿ.ಪಿ ಕಚೇರಿಯ ಎ.ಎಸ್.ಐ ಎಂ ಹೆಚ್ ರೇವಣ್ಣ ಪ್ರತಿಷ್ಠಿತ ಸೇರಿ 21 ಮಂದಿ ರಾಷ್ಟ್ರಪತಿ ಪೊಲೀಸ್ ಪದಕಕ್ಕೆ ಭಾಜನರಾಗಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಪಾಟಿದಾರ್ ಶತಕದಾಟ: ಕ್ವಾಲಿಫೈಯರ್ 2 ತಲುಪಿದ ಫಾಫ್ ಪಡೆ

newsics.com ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14ರನ್‌ಗಳ ಗೆಲುವು ಸಾಧಿಸಿದೆ. ಮಳೆಯ ಕಾರಣದಿಂದಾಗಿ ಕೊಂಚ ತಡವಾಗಿ...

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅಮ್ರೀನ್...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...
- Advertisement -
error: Content is protected !!