ಬೆಂಗಳೂರು: ಈ ಸಾಲಿನ ‘ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಆಯ್ಕೆಯಾಗಿದ್ದಾರೆ. ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ‘ಯುಗದ ಸಾಧಕ’ ಪ್ರಶಸ್ತಿ ಲಭಿಸಿದೆ. ಡಿ.31 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪತ್ರಕರ್ತರಾದ ಎಂ. ಸಿದ್ಧರಾಜು, ಹಮೀದ್ ಪಾಳ್ಯ, ರವೀಂದ್ರ ಭಟ್ ಐನಕೈ, ಕೆ.ಎನ್. ಚನ್ನೇಗೌಡ ಸೇರಿ ಹಲವರಿಗೆ ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರೆಸ್ ಕ್ಲಬ್ ಪ್ರಕಟಣೆ ತಿಳಿಸಿದೆ.
