newsics.com
ಮಂಡ್ಯ: ಅರ್ಕೇಶ್ವರ ದೇವಾಲಯದ ಅರ್ಚಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಅರ್ಚಕರ ಕುಟುಂಬಕ್ಕೆ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಸಿಎಂ ಯಡಿಯೂರಪ್ಪ ಈ ಕುರಿತು ಟ್ವೀಟ್ ಮಾಡಿದ್ದು, ಹತ್ಯೆಗೊಳಗಾದ ಪೂಜಾರಿಗಳ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪೂಜಾರಿಗಳನ್ನು ಹತ್ಯೆ ಮಾಡಿ ಹುಂಡಿ ಕಳ್ಳತನ ಮಾಡಿದ್ದು ಕೇಳಿ ತುಂಬಾ ನೋವಾಗಿದೆ ಎಂದಿದ್ದಾರೆ.
ಹತ್ಯೆಯಾದ ಗಣೇಶ್, ಪ್ರಕಾಶ್ ಹಾಗೂ ಆನಂದ ದೇವರ ಪೂಜೆಯ ಉಸ್ತುವಾರಿ ಜತೆ ದೇವಾಲಯದ ಕಾವಲು ಕಾಯುವ ಕೆಲಸ ಮಾಡುತ್ತಿದ್ದರು. ಈ ಅರ್ಕೇಶ್ವರ ದೇವಾಲಯ ಪುರಾತತ್ವ ಇಲಾಖೆಗೆ ಸೇರಿದೆ.
ಮಂಡ್ಯದ ಗುತ್ತಲು ದೇಗುಲದಲ್ಲಿ ಮೂವರು ಅರ್ಚಕರ ಕೊಲೆ