ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವಿಚಾರಣಾಧೀನ ಕೈದಿಗಳಿಬ್ಬರು ಕಲ್ಲಿನಿಂದ ಹೊಡೆದಾಡಿಕೊಂಡಿರುವ ಘಟನೆ ಇಲ್ಲಿನ ವಿಶ್ವೇಶ್ವರ ನಗರದ ಉಪ ಕಾರಾಗೃಹದಲ್ಲಿ ನಡೆದಿದೆ.
ರಾಯನಾಳ ಗ್ರಾಮದ ಸಿದ್ದಪ್ಪ ಗದಿಗೆಪ್ಪ ಕೋಳೂರ (36) ಹಲ್ಲೆಗೀಡಾದವನಾಗಿದ್ದು, ಕಿಮ್ಸ್ ಗೆ ದಾಖಲಿಸಲಾಗಿದೆ. ತಾಲೂಕಿನ ಬಮ್ಮಸಮುದ್ರ ಗ್ರಾಮದ ಖಾದರಸಾಬ ಮಹಮ್ಮದ್ ಸಾಬ ಮುನಿಯಾರ್ (40) ಹಲ್ಲೆ ನಡೆಸಿದ ವಿಚಾರಣಾಧೀನ ಕೈದಿಯಾಗಿದ್ದಾನೆ.
ಸ್ನೇಹಿತರಾಗಿದ್ದ ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಮಾತನಾಡುತ್ತ ಕುಳಿತಿದ್ದರು. ಮಾತಿನ ಮಧ್ಯೆ, ನಿನ್ನನ್ಯಾರೂ ಭೇಟಿ ಮಾಡಲು ಬರುವುದಿಲ್ಲ. ನಿನಗೆ ಜೈಲೇ ಗತಿ ಎಂದು ಸಿದ್ದಪ್ಪ ಹೇಳಿದ. ಈ ಮಾತಿನಿಂದ ಸಿಟ್ಟಾದ ಖಾದರ್, ಪಕ್ಕದಲ್ಲೇ ಇದ್ದ ಕಲ್ಲಿನಿಂದ ಸಿದ್ದಪ್ಪನ ತಲೆಗೆ ಹೊಡೆದಿದ್ದಾನೆ. ಅಶೋಕನಗರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಕೊಲೆ ಆರೋಪಿಗಳಾಗಿದ್ದಾರೆ.
ಹುಬ್ಬಳ್ಳಿ ಜೈಲಲ್ಲಿ ಕೈದಿಗಳಿಬ್ಬರ ಹೊಡೆದಾಟ
Follow Us