newsics.com
ಕೊಡಗು: ಆಸ್ತಿ ವಿಷಯವಾಗಿ ಉಂಟಾದ ವಿವಾದದಿಂದಾಗಿ ಮಾವ ತನ್ನ ಸೊಸೆಯ ಮೇಲೆ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.
ಸೊಸೆ ತೀರ್ಥ (36) ಅವರ ಮೇಲೆ ಗುಂಡು ಹಾರಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊದಲೇ ಆಸ್ತಿ ವಿಷಯವಾಗಿ ಇವರ ನಡುವೆ ಕಲಹ ಏರ್ಪಟ್ಟಿತ್ತು. ಗುರುವಾರ ದನ ಕಟ್ಟುವ ವಿಚಾರದಲ್ಲಿ ಮತ್ತೆ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಮಾವ ಕೋಪಗೊಂಡು ಸೊಸೆಯ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಆಕೆಯ ಎಡಗೈ, ಎದೆಯ ಭಾಗಕ್ಕೆ ಗುಂಡು ತಾಗಿ ಗಾಯಗೊಂಡಿರುವುದಾಗಿ ತೀರ್ಥ ಅವರ ಗಂಡ ಪೂವಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ತೀರ್ಥ ಅವರಿಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲೆ ಆರಂಭವಾದ ಮೂರೇ ದಿನದಲ್ಲಿ 262 ಮಕ್ಕಳಿಗೆ ಕೊರೋನಾ
ಆರೋಗ್ಯ ಸಚಿವಾಲಯದ ಹೆಸರಿನಲ್ಲಿ ನಕಲಿ ಖಾತೆ: 27 ಸಾವಿರ ಜನರಿಗೆ ವಂಚನೆ
ಟ್ರಂಪ್ ಹಿನ್ನಡೆ; ಅಮೆರಿಕದ ಹಲವೆಡೆ ಪ್ರತಿಭಟನೆ, ಹಿಂಸಾಚಾರ
ವಿಷಕಾರಿ ಮದ್ಯಸೇವಿಸಿ 20 ಮಂದಿ ಸಾವು