newsics.com
ರಾಮನಗರ: ಕಾರ್ಖಾನೆ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಬಿಡದಿಯ ಕಾರು ತಯಾರಿಕಾ ಸಂಸ್ಥೆ ಟೊಯೊಟಾ ಕಂಪನಿ ನೌಕರರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಕಾರ್ಮಿಕರು ಅಹೋರಾತ್ರಿ ಧರಣಿಗೆ ಮುಂದಾದ ಹಿನ್ನೆಲೆಯಲ್ಲಿ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ವಜಾಗೊಳಿಸಿದ್ದು, ಕಂಪನಿಯ ನಡೆಯಿಂದ ಕಾರ್ಮಿಕರ ಪ್ರತಿಭಟನೆ ತಾರಕಕ್ಕೇರಿದೆ.
ಕಾರ್ಮಿಕರ ಪ್ರತಿಭಟನೆಯ ಕಾವು ಹೆಚ್ಚಾದ ಕಾರಣ ಕಾರ್ಖಾನೆ ಆಡಳಿತ ಮಂಡಳಿ ತಾತ್ಕಾಲಿಕ ಲಾಕೌಟ್ ಘೋಷಣೆ ಮಾಡಿದೆ.
ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಮಿಕರನ್ನು ಶೋಷಿಸುತ್ತಿದೆ ಎಂದು ಆರೋಪಿಸಿ ಕಂಪನಿಯ ಸುಮಾರು 3500 ಕಾರ್ಮಿಕರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಕೆಲಸ ಮಾಡಲು ಅಸಾಧ್ಯವಾದ ರೀತಿಯಲ್ಲಿ ಕೆಲಸದ ಟಾರ್ಗೆಟ್ ನೀಡುತ್ತಿದ್ದಾರೆ. ಕಾರ್ಮಿಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಪ್ರತಿಭಟನಾನಿರತ ಕಾರ್ಮಿಕರು ದೂರಿದ್ದಾರೆ.
ಕಾರ್ಖಾನೆಯ ಆಡಳಿತ ಮಂಡಳಿ, ನಮ್ಮ ಕಂಪನಿ ಜಪಾನ್ ಮೂಲದ ಅಂತಾರಾಷ್ಟ್ರೀಯ ಕಂಪನಿ. ಇಲ್ಲಿಯ ಕಾನೂನು ನಮಗೆ ಅನ್ವಯಿಸುವುದಿಲ್ಲ ಎಂದು ದುಂಡಾವರ್ತನೆ ಮಾಡುತ್ತಿದೆ ಎಂದು ಕಾರ್ಮಿಕ ಸಂಘಟನೆ ಆರೋಪಿಸಿದೆ.
ಚಿರತೆ, ಕರಡಿ ಕಾಟ; 15 ದಿನ ಅಂಜನಾದ್ರಿ ಬೆಟ್ಟಕ್ಕೆ ಪ್ರವೇಶ ನಿಷೇಧ
ಕೋವಿಡ್ ಪರೀಕ್ಷೆ: ವಿಶ್ವದಲ್ಲಿ ಭಾರತಕ್ಕೆ ಎರಡನೇ ಸ್ಥಾನ
ಕೋಲ್ಕತ್ತಾದಲ್ಲಿ ಅಗ್ನಿ ದುರಂತ; 50-60 ಮನೆ ಬೆಂಕಿಗಾಹುತಿ
2020ರ ಲೋಕೋಪಕಾರಿ ಪಟ್ಟಿಯಲ್ಲಿ ಅಜೀಮ್ ಪ್ರೇಮ್’ಜಿಗೆ ಅಗ್ರಸ್ಥಾನ
ನ.11ರಿಂದ 3 ದಿನಗಳ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
ಸಂತ ನೃತ್ಯ ಗೋಪಾಲ್ ದಾಸ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು