ಕಾರ್ಮಿಕರ ಪ್ರತಿಭಟನೆ; ತಾತ್ಕಾಲಿಕ ಲಾಕೌಟ್ ಘೋಷಿಸಿದ ಟೊಯೊಟಾ

newsics.comರಾಮನಗರ: ಕಾರ್ಖಾನೆ ಕಾರ್ಮಿಕ‌ ವಿರೋಧಿ ನೀತಿ ಖಂಡಿಸಿ ಬಿಡದಿಯ ಕಾರು ತಯಾರಿಕಾ ಸಂಸ್ಥೆ ಟೊಯೊಟಾ ಕಂಪನಿ ನೌಕರರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.ಕಾರ್ಮಿಕರು ಅಹೋರಾತ್ರಿ ಧರಣಿಗೆ ಮುಂದಾದ ಹಿನ್ನೆಲೆಯಲ್ಲಿ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ವಜಾಗೊಳಿಸಿದ್ದು, ಕಂಪನಿಯ ನಡೆಯಿಂದ ಕಾರ್ಮಿಕರ ಪ್ರತಿಭಟನೆ ತಾರಕಕ್ಕೇರಿದೆ.ಕಾರ್ಮಿಕರ ಪ್ರತಿಭಟನೆಯ ಕಾವು ಹೆಚ್ಚಾದ ಕಾರಣ ಕಾರ್ಖಾನೆ ಆಡಳಿತ ಮಂಡಳಿ ತಾತ್ಕಾಲಿಕ ಲಾಕೌಟ್ ಘೋಷಣೆ ಮಾಡಿದೆ.ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಮಿಕರನ್ನು ಶೋಷಿಸುತ್ತಿದೆ ಎಂದು ಆರೋಪಿಸಿ ಕಂಪನಿಯ ‌ಸುಮಾರು 3500 ಕಾರ್ಮಿಕರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಕೆಲಸ … Continue reading ಕಾರ್ಮಿಕರ ಪ್ರತಿಭಟನೆ; ತಾತ್ಕಾಲಿಕ ಲಾಕೌಟ್ ಘೋಷಿಸಿದ ಟೊಯೊಟಾ