Wednesday, March 3, 2021

ಮಾನಸಿಕ ಒತ್ತಡ; ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ

newsics.com
ಬ್ರಹ್ಮಾವರ(ಉಡುಪಿ): ಡೆತ್ ನೋಟ್ ಬರೆದಿಟ್ಟು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಚಾಂತಾರು ಎಂಬಲ್ಲಿ ಗುರುವಾರ ಸಂಜೆ ಈ ದುರ್ಘಟನೆ ನಡೆದಿದೆ. ಚಾಂತಾರು ಗ್ರಾಮದ ಶ್ರೀಶ ಮಧ್ಯಸ್ಥ ಹಾಗೂ ತ್ರಿವೇಣಿ ದಂಪತಿ ಪುತ್ರಿ ಅನುಶ್ರೀ(16) ಆತ್ಮಹತ್ಯೆಗೆ ಶರಣಾದವಳು. ಬ್ರಹ್ಮಾವರದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೆ ತರಗತಿ ಓದುತ್ತಿದ್ದ ಅನುಶ್ರೀ, ಮನೆಯಲ್ಲಿಯೇ ಆನ್ಲೈನ್ ಕ್ಲಾಸ್ ಗೆ ಹಾಜರಾಗುತ್ತಿದ್ದಳು. ಎರಡು ದಿನಕ್ಕೊಮ್ಮೆ ಶಾಲೆಗೆ ಹೋಗುತ್ತಿ ದ್ದಳು. ಇವರ ತಾಯಿ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮರಣಪತ್ರ ಬರೆದಿಟ್ಟ ಅನುಶ್ರೀ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲು ಲಾಕ್ ಮಾಡಿ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಾವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಹಾರ ಅರಸಿ ಬಂದ ಆನೆಗೆ ಬೆಂಕಿಹಚ್ಚಿದ ದುಷ್ಕರ್ಮಿಗಳು

ಮೃತ ವ್ಯಕ್ತಿಯ ವೀರ್ಯಾಣು ಪಡೆಯುವ ಹಕ್ಕು ಆತನ ಪತ್ನಿಗೆ ಮಾತ್ರ ಇದೆ- ಕೋರ್ಟ್

ಮತ್ತಷ್ಟು ಸುದ್ದಿಗಳು

Latest News

ಜಾರಕಿಹೊಳಿ ರಾಜೀನಾಮೆ ನೀಡದಿದ್ದರೆ ಪ್ರಧಾನಿಗೆ ದೂರು

newsics.com ಬೆಂಗಳೂರು: ವಿವಾದಕ್ಕೆ ಗುರಿಯಾಗಿರುವ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಈ ಸಂಬಂಧ ಪ್ರಧಾನಿ ನರೇಂದ್ರ  ಮೋದಿ ಅವರಿಗೆ ದೂರು ನೀಡುವುದಾಗಿ ...

ಕಾನೂನು ಹೋರಾಟಕ್ಕೆ ರಮೇಶ್ ಜಾರಕಿಹೊಳಿ ಸಿದ್ಧತೆ, ಅಜ್ಞಾತ ಸ್ಥಳದಲ್ಲಿ ಕಾರ್ಯತಂತ್ರ

newsics.com ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಚಿಸಿರುವ ಸೆಕ್ಸ್ ಸಿಡಿ ಹಿನ್ನೆಲೆಯಲ್ಲಿ ಪದಚ್ಯುತಿ ಭೀತಿ ಎದುರಿಸುತ್ತಿರುವ ಸಚಿವ ರಮೇಶ್ ಜಾರಕಿಹೊಳಿ ಕಾನೂನು ಸಮರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇರುವ ಜಾರಕಿಹೊಳಿ ಕಾನೂನು ತಜ್ಞರ...

ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಐಷಾರಾಮಿ ಹೋಟೆಲ್!

newsics.comವಾಷಿಂಗ್ಟನ್‌: ಇನ್ನು ನಾಲ್ಕೇ ವರ್ಷದಲ್ಲಿ ಅಂತರಿಕ್ಷದಲ್ಲೂ ಇಡ್ಲಿ, ಟೀ, ಕಾಫಿ ಸಿಗಬಹುದು.ಮುಂದಿನ 4 ವರ್ಷದಲ್ಲಿ ಅಂತರಿಕ್ಷದಲ್ಲಿ  “ವೊಯೇಜರ್‌ ಸ್ಟೇಷನ್‌’ ಎಂಬ ವೈಭವೋಪೇತ ಹೋಟೆಲೊಂದು ಆರಂಭವಾಗಲಿದೆ. ಆರ್ಬಿಟಲ್‌ ಅಸೆಂಬ್ಲಿ ಕಾರ್ಪೊರೇಷನ್‌ (ಒಎಸಿ)...
- Advertisement -
error: Content is protected !!