Thursday, December 9, 2021

ನಾಳೆಯಿಂದ ಪಬ್, ಬಾರ್ ಬಂದ್, ಫುಡ್ ಪಾರ್ಸೆಲ್ ಗಷ್ಟೇ ಹೋಟೆಲ್ ಸೀಮಿತ

Follow Us

ಬೆಂಗಳೂರು: ದೇಶಾದ್ಯಂತ ಕೊರೋನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದೆ. ಶನಿವಾರದಿಂದ ಪಬ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಗಳು ಬಂದ್ ಆಗಲಿದ್ದು, ಹೊಟೇಲ್ ಗಳಿಗೂ ಕೆಲ ನಿರ್ಬಂಧ ವಿಧಿಸಲಾಗಿದೆ. ಹೊಟೇಲ್ ಗಳಲ್ಲಿ ಕಿಚನ್ ಮಾತ್ರ ತೆರೆಯಲಿದ್ದು, ಗ್ರಾಹಕರು ಪಾರ್ಸಲ್ ಕೊಂಡೊಯ್ಯಲಷ್ಟೇ ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ 31ರವರೆಗೆ ಈ ನಿರ್ಬಂಧ ಅನ್ವಯವಾಗಲಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಈ ಎಲ್ಲ ಮಾಹಿತಿಯನ್ನು ನೀಡಿದ್ದಾರೆ. ವಿಡಿಯೋ ಸಂವಾದ ವೇಳೆ ಯಡಿಯೂರಪ್ಪ ಸೇರಿ ವಿವಿಧ ರಾಜ್ಯಗಳ ಸಿಎಂ ಜತೆ ಕೊರೋನಾ ಬಗ್ಗೆ ಪ್ರಧಾನಿ ಮೋದಿಯವರು ಪರಿಸ್ಥಿತಿ ವಿಚಾರಿಸಿದರು. ಹೆಚ್ಚೆಚ್ಚು ಪ್ರಯೋಗಾಲಯಗಳನ್ನ ತೆರೆಯಬೇಕು. ಇದಕ್ಕೆ ಕೇಂದ್ರ ಸಹಕಾರ ಕೊಡುತ್ತದೆ ಎಂದು ಪ್ರಧಾನಿ ಮೋದಿ ಅವರು ತಮಗೆ ಭರವಸೆ ನೀಡಿದ್ಧಾರೆ. ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸಂಪೂರ್ಣ ಸಜ್ಜಾಗಿದೆ. ಕೇಂದ್ರದಿಂದ ಹಣಕಾಸು ಸಹಾಯವನ್ನು ನಾವು ಅಪೇಕ್ಷಿಸುತ್ತಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!