newsics.com
ಬೆಂಗಳೂರು: ಶಾಲಾ ಪುನಾರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಮಾರ್ಗಸೂಚಿ ಪ್ರಕಟಿಸಿದೆ.
ಅಕ್ಟೋಬರ್ 15 ರ ಬಳಿಕ ಪಿಯುಸಿ ಹಾಗೂ ಪ್ರೌಢಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ ಎನ್ನಲಾಗಿದೆ.
ಈ ಸಂಬಂಧ ಶಿಕ್ಷಣ ಸಚಿವ ಸುರೇಶಕುಮಾರ್, ಪ್ರೌಢಶಾಲೆ ಹಾಗೂ ಪಿಯು ಉಪನ್ಯಾಸಕರ ಪ್ರತಿನಿಧಿಗಳ ಜತೆ ಚರ್ಚೆ ನಡೆಸಿದ್ದು, ಹಂತ ಹಂತವಾಗಿ ತರಗತಿ ಆರಂಭಿಸಲು ಚರ್ಚೆ ತೀರ್ಮಾನಿಸಿದೆ. ಬಳಿಕ ಪರಿಸ್ಥಿತಿ ನೋಡಿಕೊಂಡು 7 ಹಾಗೂ 8 ನೇ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಅಕ್ಟೋಬರ್ 10 ರಂದು ರಾಜ್ಯದಲ್ಲಿ ಶಾಲೆ ಕಾಲೇಜು ಪುನಾರಂಭದ ಬಗ್ಗೆ ಶಿಕ್ಷಣ ಇಲಾಖೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಅ.15ರ ಬಳಿಕ ಪಿಯು ಕಾಲೇಜು, ಹೈಸ್ಕೂಲ್ ಆರಂಭಕ್ಕೆ ಸರ್ಕಾರ ಚಿಂತನೆ
ಇಂದು ಅನ್ಲಾಕ್ ಮಾರ್ಗಸೂಚಿ ಪ್ರಕಟಿಸಿರುವ ರಾಜ್ಯ ಸರ್ಕಾರ ಆಯಾ ಶಿಕ್ಷಣ ಸಂಸ್ಥೆಗಳೊಡನೆ ಚರ್ಚೆ ನಡೆಸಿ ಶಾಲಾ-ಕಾಲೇಜು ಆರಂಭಕ್ಕೆ ಮುಂದಾಗಿದೆ. ಇದೇ ವೇಳೆ ಆನ್ಲೈನ್ ತರಗತಿಗೂ ಕೂಡ ಅದು ಒತ್ತು ನೀಡಿದ್ದು, ಇದನ್ನೇ ಮುಂದುವರೆಸಲು ಶಿಕ್ಷಣ ಸಂಸ್ಥೆಗಳು ಇಚ್ಚಿಸಿದರೆ ಇದಕ್ಕೆ ಅವಕಾಶ ಇದೆ ಎಂದಿದೆ. ಈ ಕೆಲವು ಸುರಕ್ಷತಾ ಕ್ರಮಗಳೊಂದಿಗೆ ಶಾಲಾ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.
* ಹಾಜರಾತಿ ಕಡ್ಡಾಯವಲ್ಲ. ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಕುರಿತು ಪೋಷಕರದ್ದೇ ಅಂತಿಮ ತೀರ್ಮಾನವಾಗಿರುತ್ತದೆ.
* ಒಂದು ವೇಳೆ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ಬಯಸಿದ್ದರೆ, ಅದಕ್ಕೆ ಅವರ ಪೋಷಕರಿಂದ ಅನುಮತಿ ಪತ್ರ ಕಡ್ಡಾಯವಾಗಿದೆ.
* ಉನ್ನತ ಶಿಕ್ಷಣ ಇಲಾಖೆ ಕಾಲೇಜು ಆರಂಭ ಕುರಿತು ಪರಿಸ್ಥಿತಿ ಅವಲೋಕಿಸಿ ಸಮಯ ನಿಗದಿಸಬಹುದು. ಆನ್ಲೈನ್ ಮೂಲಕ ಉತ್ತೇಜನಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕು.