Tuesday, April 13, 2021

ಗದ್ದೆಯಲ್ಲೇ ಟ್ರ್ಯಾಕ್ಟರ್’ನಲ್ಲಿ ಯೋಧರಿಬ್ಬರ ಕ್ವಾರಂಟೈನ್!

ಗದಗ: ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದ್ದರೂ ಊರೆಲ್ಲ ಸುತ್ತಾಡೋ ಮಂದಿ ಮಧ್ಯೆ ತನ್ನ ಕುಟುಂಬಕ್ಕೆ, ಗ್ರಾಮಸ್ಥರಿಗೆ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಯೋಧರಿಬ್ಬರು ಸ್ವಯಂ ಕ್ವಾರಂಟೈನ್’ಗೆ ಒಳಗಾದ ಮಾದರಿ ಘಟನೆಗೆ ಗದಗ ಸಾಕ್ಷಿಯಾಗಿದೆ.
ಗದಗಿನ ಬೆಂತೂರು ಗ್ರಾಮದ ಯೋಧ ಪ್ರಕಾಶ್ ಹೈಗರ್ ಅರುಣಾಚಲಪ್ರದೇಶದಲ್ಲಿ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದು ಒಂದು ತಿಂಗಳ ರಜೆ ಮೇಲೆ ಹುಟ್ಟೂರಿಗೆ ಬಂದಿದ್ದಾರೆ‌‌. ಕೋವಿಡ್-19 ಟೆಸ್ಟ್’ಗೂ ಒಳಗಾಗಿರುವ ಅವರ ವರದಿ ನೆಗೆಟಿವ್ ಬಂದಿದೆ. ಆದರೂ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ 14 ದಿನ ಕ್ವಾರಂಟೈನ್ ಆಗಲು ಸೂಚಿಸಿದೆ. ‌ಹೀಗಾಗಿ ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಪ್ರಕಾಶ್ ತಮ್ಮ ಮನೆಯಿಂದ 2 ಕಿಲೋಮೀಟರ್ ದೂರದಲ್ಲಿರೋ ತಮ್ಮ ಹೊಲದಲ್ಲಿ ಟ್ರ್ಯಾಕ್ಟರ್’ಗೆ ಪ್ಲ್ಯಾಸ್ಟಿಕ್ ಕವರ್ ಕಟ್ಟಿಕೊಂಡು ತಮಗೆ ತಾವೇ ದಿಗ್ಭಂದನ ವಿಧಿಸಿಕೊಂಡಿದ್ದಾರೆ.
ಪ್ರಕಾಶ್ ಅವರದ್ದು ಅವಿಭಕ್ತ ಕುಟುಂಬವಾಗಿದ್ದು ಪತ್ನಿ, ಮಕ್ಕಳು,ತಂದೆ-ತಾಯಿ ಸೇರಿ 15ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಹೀಗಾಗಿ ಯಾರಿಗೂ ಸಮಸ್ಯೆಯಾಗಬಾರದೆಂದು ಪ್ರಕಾಶ್ ಒಬ್ಬಂಟಿಯಾಗಿ ಮನೆಯಿಂದ ದೂರ ಉಳಿಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇನ್ನು ಹಿರಿಯೂರಿನ ಖಂಡೇನಹಳ್ಳಿಯಲ್ಲೂ ಬಿಎಸ್ಎಫ್ ಯೋಧ ಯೋಗೇಶ್ ಕೂಡ ಸುರಕ್ಷತೆ ದೃಷ್ಟಿಯಿಂದ ತಮ್ಮ‌ಜಮೀನಿನಲ್ಲೇ ಸ್ವಯಂ ಕ್ವಾರಂಟೈನ್ ಆಗುವ ಮೂಲಕ ಗ್ರಾಮಸ್ಥರ ಸುರಕ್ಷತೆ ಹಾಗೂ ಸರ್ಕಾರದ ನಿಯಮಕ್ಕೆ ಗೌರವ ನೀಡಿದ್ದಾರೆ. ಯೋಗೇಶ್ ಝಾನ್ಸಿಯಿಂದ ರಜೆ ಮೇಲೆ ಸ್ವಂತ ಊರಿಗೆ ಬಂದಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!