newsics.com
ಕಲಬುರಗಿ: ಹೋಟೆಲ್ನಲ್ಲಿ ಗ್ರಾಹಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ ಜ್ಯೋತಿಷಿಯ ಹತ್ಯೆಯಲ್ಲಿ ಅಂತ್ಯವಾಗಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಹಳಕರ್ಟಿ ಗ್ರಾಮದ ಸುರೇಶ ಭೀಮರಾವ್ ವಾಸ್ಟರ್ (58) ಕೊಲೆಯಾದ ಜ್ಯೋತಿಷಿ.
ಹಳಕರ್ಟಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ರಾಜಕೋಟ್’ನಲ್ಲಿ ಜ್ಯೋತಿಷ್ಯ ಹೇಳಿಕೊಂಡು ಜೀವನ ನಡೆಸುತ್ತಿರುವ ಸುರೇಶ ವಾಸ್ಟರ್, ಹಳಕರ್ಟಿ ಗ್ರಾಮದಲ್ಲಿ ಸ್ವಂತ ಜಮೀನು ಮತ್ತು ಮನೆ ಹೊಂದಿದ್ದಾರೆ. ಜಮೀನು ನೋಂದಣಿ ಹಿನ್ನೆಲೆಯಲ್ಲಿ ಗುರುವಾರ ಕುಟುಂಬ ಸಮೇತ ಸ್ವಗ್ರಾಮಕ್ಕೆ ಆಗಮಿಸಿದ್ದರು.
ಗ್ರಾಮದ ಚೌಡೇಶ್ವರ ವೃತ್ತದ ಹೋಟೆಲ್ವೊಂದರಲ್ಲಿ ಶುಕ್ರವಾರ ಸುರೇಶ ಬಜ್ಜಿ ತಿನ್ನಲು ಹೋಗಿದ್ದಾಗ ಗ್ರಾಹಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟಕ್ಕೆ ಕಾರಣವಾಗಿದೆ. ಮಾರಾಮಾರಿಯಲ್ಲಿ ನೆಲಕ್ಕುರುಳಿದ ಸುರೇಶ ವಾಸ್ಟರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಮಹೆಬೂಬ ಅಲಿ, ಸೈಯದ್ ಪಾಷಾ, ಸೈಯದ್ ಮಜರ್, ಶೋಯಲ್, ಮಹ್ಮದ್ ಶಾರುಖ್, ಸೈಯದ್ ಹಜಾರ್ ಸೇರಿದಂತೆ ಒಟ್ಟು ಆರು ಜನರನ್ನು ವಾಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೌಕರರು, ಕಾರ್ಮಿಕರಿಗೆ ಕ್ವಾರಂಟೈನ್ ರಜೆ ನೀಡಲು ಸರ್ಕಾರ ಆದೇಶ