newsics.com
ಮಂಡ್ಯ: ವಿಧಾನಸಭೆ ಚುನಾವಣೆ ಸಮಯದಲ್ಲಿ ಮಂಡ್ಯ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲಾಗಿದೆ.
ಗೋಪಾಲಯ್ಯ ಅವರ ಬದಲಿಗೆ ಆರ್.ಅಶೋಕ್ ಅವರನ್ನು ಹೊಸ ಉಸ್ತುವಾರಿ ಸಚಿವರನ್ನು ನೇಮಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಇಂದು(ಜನವರಿ 24) ಆದೇಶ ಹೊರಡಿಸಿದೆ.
ಹಾಸನ ಜಿಲ್ಲಾ ಉಸ್ತುವಾರಿ ಜೊತೆಗೆ ಮಂಡ್ಯ ಜಿಲ್ಲೆಯನ್ನು ಸಹ ಹೆಚ್ಚುವರಿಯಾಗಿ ಅಬಕಾರಿ ಸಚಿವ ಗೋಪಾಲಯ್ಯ ಅವರಿಗೆ ನೀಡಲಾಗಿತ್ತು. ಆದ್ರೆ, ಇದೀಗ ಚುನಾವಣೆ ಸಂದರ್ಭದಲ್ಲಿ ಬದಲಾವಣೆ ಮಾಡಿ ಮಂಡ್ಯ ಜಿಲ್ಲಾ ಜವಾಬ್ದಾರಿಯನ್ನು ಕಂದಾಯ ಅಶೋಕ್ ನೀಡಲಾಗಿದೆ. ಅಶೋಕ್ ಬೆಂಗಳೂರು ನಗರ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದರು. ಆದ್ರೆ, ಇದೀಗ ಅವರಿಗೆ ಬೆಂಗಳೂರು ಬದಲಿಗೆ ಮಂಡ್ಯ ನೀಡಲಾಗಿದೆ.