newsics.com
ಹಾಸನ: ಹೆಣ್ಣಾನೆಯೊಂದಕ್ಕೆ ರೇಡಿಯೋ ಕಾಲರ್ ಅಳವಡಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಸತತ ಮೂರನೇ ದಿನದ ಪ್ರಯತ್ನವಾಗಿ ಸಕಲೇಶಪುರದಲ್ಲಿ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಲೆನಾಡಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ನಿರಂತರವಾಗಿ ಪ್ರಾಣಿ ಮತ್ತು ಮಾನವನ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಅಲ್ಲದೇ ಆನೆಗಳನ್ನು ಸ್ಥಳಾಂತರ ಮಾಡಬೇಕೆಂದು ಸಾಲು ಸಾಲು ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತು ಈಗ ಒಂದು ಗಂಡು ಕಾಡಾನೆ ಮತ್ತು ಮತ್ತು ಮೂರು ಹೆಣ್ಣು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಮುಂದಾಗಿದೆ. ಮೂರು ದಿನಗಳ ಹೆಣ್ಣಾನೆಗೆ ರೇಡಿಯೋ ಕಾಲರ್ ಹಾಕುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಶಾರ್ಪ್ ಶೂಟರ್ ವೆಂಕಟೇಶ್ ಸಾಕಾನೆಗಳ ಸಹಕಾರದಿಂದ ರೈಫಲ್ ಮೂಲಕ ಹೆಣ್ಣಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಬಳಿಕ ರೇಡಿಯೋ ಕಲರ್ ಅಳವಡಿಸಿ ಪುನಃ ಕಾಡಿಗೆ ಆನೆಯನ್ನು ಬಿಡಲಾಗಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ದೊಡ್ಡ ಬೆಟ್ಟದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಘಾಸಿಗೊಂಡಿರುವ ಕಾಡಾನೆಯನ್ನು ನೋಡಿ ಉಳಿದ ಆನೆಗಳು ದೊಡ್ಡಬೆಟ್ಟದ ಕಡೆಯಿಂದ ಬೋಸ್ಮಾನಹಳ್ಳಿ ಕಡೆಗೆ ವಲಸೆ ಹೊರಟಿವೆ ಎಂದು ಡಿಎಫ್ಒ ಬಸವರಾಜ್ ತಿಳಿಸಿದ್ದಾರೆ.