Wednesday, July 6, 2022

ರಫೇಲ್’ಗೂ ಕರ್ನಾಟಕಕ್ಕೂ ಇದೆ ನಂಟು…!

Follow Us

ವಿಜಯಪುರ: ದೇಶದ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ರಫೇಲ್ ಯುದ್ಧ ವಿಮಾನ ದೇಶ ಬತ್ತಳಿಕೆ ಸೇರುವ ಸಂಭ್ರಮ ದೇಶದೆಲ್ಲೆಡೆ ತುಂಬಿದ್ದರೆ, ವಿಜಯಪುರದ ಸೈನಿಕ ಶಾಲೆಯಲ್ಲಿ ತಮ್ಮ ವಿದ್ಯಾರ್ಥಿಗೆ ಈ ರಫೇಲ್ ಯುದ್ಧ ವಿಮಾನ ಮುನ್ನಡೆಸುವ ಅವಕಾಶ ಸಿಕ್ಕಿರುವುದಕ್ಕೆ ಸಂಭ್ರಮ ಮುಗಿಲು ಮುಟ್ಟಿದೆ. ಶಾಲೆಯಲ್ಲಿ ಈ ಖುಷಿಯನ್ನು ಸಿಹಿ ಹಂಚಿ ಸಂಭ್ರಮಿಸಲಾಗುತ್ತಿದೆ.
ಯುದ್ಧ ವಿಮಾನದ ಮೊದಲ ಪೈಲಟ್ ಟೀಂನಲ್ಲಿ ವಿಜಯಪುರದ ಸೈನಿಕ ಶಾಲೆಯಲ್ಲಿ ಅಧ್ಯಯನ ಮಾಡಿದ್ದ ಅರುಣಕುಮಾರ್ ಸ್ಥಾನ ಪಡೆದಿದ್ದಾನೆ. 1994 ರಿಂದ 2001 ರವರೆಗೆ 7 ವರ್ಷಗಳ ಕಾಲ ಈ ಸೈನಿಕ ಶಾಲೆಯಲ್ಲಿ ಅಧ್ಯಯನ ಮಾಡಿದ್ದು, ಈ ಸಮರ್ಥ ಸೈನಿಕನಿಗೆ ಈ ಯುದ್ಧ ವಿಮಾನ ಮುನ್ನಡೆಸುವ ಅವಕಾಶ ಸಿಕ್ಕಿದೆ.
ಬಿಹಾರದ ರೋಹ್ಟಕ್ ಮೂಲದ ಅರುಣಕುಮಾರ್ ತಂದೆ ನಾಗೇಂದ್ರಪ್ರಸಾದ ಬೆಂಗಳೂರಿನಲ್ಲಿ ಜ್ಯೂನಿಯರ್ ಏರ್ ವಾರಂಟ್ ಆಗಿದ್ದರು. ಈ ವೇಳೆ 1994 ರಲ್ಲಿ ಬೆಂಗಳೂರು ಕೇಂದ್ರೀಯ ವಿದ್ಯಾಲಯದಲ್ಲಿ 5 ನೇ ತರಗತಿ ಓದಿದ್ದ ಅರುಣಕುಮಾರ್, ಸೈನಿಕ ಶಾಲೆಗೆ ಆಯ್ಕೆಯಾಗಿ ಪ್ರವೇಶ ಪಡೆದಿದ್ದರು. 2001 ರಲ್ಲಿ ಪಿಯುಸಿ ದ್ವಿತೀಯ ವಿಜ್ಞಾನ ಪರೀಕ್ಷೆ ಉತ್ತಿರ್ಣನಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಆಯ್ಕೆಯಾಗಿ ವಾಯುಸೇನೆಗೆ ಸೇರ್ಪಡೆಯಾಗಿದ್ದ ಅರುಣಕುಮಾರ್ ವಿದ್ಯಾರ್ಥಿ ದೆಸೆಯಲ್ಲೂ ಪ್ರತಿಭಾವಂತ ಹಾಗೂ ಛಲಗಾರ ಎಂದು ಸೈನಿಕ ಶಾಲೆಯ ಶಿಕ್ಷಕರು ನೆನಪಿಸಿಕೊಳ್ಳುತ್ತಾರೆ.
ರಫೇಲ್ ಯುದ್ಧ ವಿಮಾನ ಭಾರತದ ಕನಸು. ಆ ಕನಸನ್ನು ಮುನ್ನಡೆಸುವ ವಾಯುಸೇನೆಯ ವಿಂಗ್ ಕಮಾಂಡರ್ ನಮ್ಮ ಶಾಲೆಯ ವಿದ್ಯಾರ್ಥಿ ಎಂಬುದು ನಮಗೆಲ್ಲ ಸಂತೋಷದ ಸಂಗತಿ. ಆತ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಎಂದು ನೇವಿ ಕ್ಯಾಪ್ಟನ್ ವಿನಯ ತಿವಾರಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ; ಅಭಿನಂದಿಸಿದ ಪ್ರಧಾನಿ ಮೋದಿ

newsics.com ನವದೆಹಲಿ; ರಾಜ್ಯಸಭೆಗೆ ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸಂಗೀತ ಮಾಂತ್ರಿಕ ಇಳಯರಾಜ, ಅಥ್ಲೀಟ್​ ಪಿಟಿ ಉಷಾ ಹಾಗೂ ಚಿತ್ರಕಥೆ ಗಾರ ವಿಜಯೇಂದ್ರ ಪ್ರಸಾದ್  ನಾಮ ನಿರ್ದೇಶನಗೊಂಡಿದ್ದಾರೆ. https://twitter.com/narendramodi/status/1544693793240322049?t=2u64d_ttEmETQgNsb5Joxg&s=19 ನಾಲ್ವರು...

ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿಗಳ ಕಾರು ಅಪಘಾತ

newsics.com ಧಾರವಾಡ; ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿಗಳ ಕಾರು ಅಪಘಾತವಾಗಿದೆ. ನಿಡಸೋಶಿಗೆ ಮರಳುವಾಗ ದುರ್ಘಟನೆ ಸಂಭವಿಸಿದೆ. ಸ್ವಾಮೀಜಿಗಳು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ತಾಲೂಕಿನ ತೇಗೂರ ಬಳಿ ಕಾರು...

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಶಿಖರ್ ಧವನ್ ನಾಯಕ

newsics.com ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಶಿಖರ್...
- Advertisement -
error: Content is protected !!