newsics.com
ಬೆಂಗಳೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನದ ವೇಳೆ ನೀಡುವ ಬಿಸಿಯೂಟದಲ್ಲಿ ‘ರಾಗಿ ಮುದ್ದೆ’, ‘ಜೋಳದ ರೊಟ್ಟಿ’ಯ ಊಟ ಸಿಗಲಿದೆ.
ದಕ್ಷಿಣ ಕರ್ನಾಟಕ ಭಾಗದ ಕಡೆಗೆ ರಾಗಿ ಮುದ್ದೆ ಮತ್ತು ಉತ್ತರ ಕರ್ನಾಟಕದ ಕಡೆ ಜೋಳದ ರೊಟ್ಟಿಯನ್ನು ನೀಡಲು ನಿರ್ಧರಿಸಿದೆ. 50 ಗ್ರಾಂ ಮುದ್ದೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಇಲಾಖೆ ಬಂದಿದೆ. ಮುದ್ದೆ ಮಾಡುವುದು ಒಂದು ಸವಾಲಿನ ಕೆಲಸವಾಗಿರುವುದರಿಂದ ಒಂದು ವೇಳೆ ಮುದ್ದೆ ನೀಡಲು ಸಾಧ್ಯವಾಗದಿದ್ದರೆ, ಇದಕ್ಕೆ ಪರ್ಯಾಯವಾಗಿ ‘ರಾಗಿ ಅಂಬಲಿ’ ನೀಡುವುದಕ್ಕೂ ಇಲಾಖೆ ಆಲೋಚಿಸಿದೆ.
ಇದಕ್ಕೆ ಬೇಕಾದ ಸಿದ್ಧತೆ ನಡೆಯುತ್ತಿದ್ದು, ಶಿಕ್ಷಣ ಇಲಾಖೆ ಕೇಂದ್ರ ಸರ್ಕಾರದ ಅನುಮತಿ ಜತೆಗೆ ಅನುದಾನದ ನಿರೀಕ್ಷೆಯಲ್ಲಿದೆ. ಮಕ್ಕಳಿಗೆ ಪೌಷ್ಟಿಕಾಂಶದ ಊಟ ನೀಡುವ ಉದ್ದೇಶದಿಂದ ಶಾಲಾ ಮತ್ತು ಸಾಕ್ಷರತಾ ಇಲಾಖೆಯು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮುದ್ದೆ, ರೊಟ್ಟಿಯನ್ನು ಕೊಡಲು ನಿರ್ಧಾರ ಮಾಡಿದೆ.
ಚುನಾವಣೆಯಲ್ಲಿ ಗೆದ್ದಿದ್ದು ಪತ್ನಿಯರು, ಪ್ರಮಾಣವಚನ ಸ್ವೀಕರಿಸಿದ್ದು ಪತಿ ಮಹಾಶಯರು
ಭಾರತಕ್ಕೆ ಬಂತು ಮತ್ತೊಂದು ಚಿನ್ನ: ಕುಸ್ತಿಯಲ್ಲಿ ಗೆದ್ದು ಸಂಭ್ರಮಿಸಿದ ಬಜರಂಗ ಪೂನಿಯಾ