ಬೆಂಗಳೂರು: ಚಂದನವನದಲ್ಲಿ ಮಾದಕ ದ್ರವ್ಯ ಜಾಲದ ನಂಟಿನ ಆರೋಪಕ್ಕೆ ಗುರಿಯಾಗಿ ಬಂಧನದಲ್ಲಿರುವ ರಾಗಿಣಿ ಮತ್ತು ಸಂಜನಾ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.ಎನ್ ಡಿ ಪಿ ಎಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಇಬ್ಬರು ಆರೋಪಿಗಳ ಜಾಮೀನು ಬಿಡುಗಡೆಗೆ ಸಿಸಿಬಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಗಳಿವೆ. ಆರೋಪಿಗಳು ಪ್ರಭಾವಶಾಲಿಗಳಾಗಿದ್ದು ಸಾಕ್ಷ್ಯನಾಶ ಮಾಡಲಿದ್ದಾರೆ ಎಂಬ ವಾದವನ್ನು ಸಿಸಿಬಿ ಪರ ವಕೀಲರು ಮಂಡಿಸುವ ಸಾಧ್ಯತೆಯಿದೆ.
ರಾಗಿಣಿ ಮತ್ತು ಸಂಜನಾ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ.