ಬೆಂಗಳೂರು: ಚಂದನವನದಲ್ಲಿ ಮಾದಕ ದ್ರವ್ಯ ಜಾಲದ ನಂಟಿನ ಆರೋಪ ಎದುರಿಸುತ್ತಿರುವ ನಟಿ ರಾಗಿಣಿ ತಮ್ಮ ಫ್ಲ್ಯಾಟ್ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ರಾಗಿಣಿ ಅವರ ತಂದೆ ರಾಕೇಶ್ ದ್ವಿವೇದಿ ಖಾಸಗಿ ವೆಬ್ ಸೈಟ್ ನಲ್ಲಿ ಈ ಸಂಬಂಧ ಜಾಹೀರಾತು ನೀಡಿದ್ದಾರೆ.
ಬೆಂಗಳೂರಿನ ನ್ಯಾಯಾಂಗ ಬಡಾವಣೆಯಲ್ಲಿ ಇರುವ ಈ ಫ್ಲ್ಯಾಟ್ ಮೌಲ್ಯ ಎರಡು ಕೋಟಿ ರೂಪಾಯಿ ಎಂದು ಅವರು ನಮೂದಿಸಿದ್ದಾರೆ. ಪುತ್ರಿಯ ಬಂಧನದಿಂದಾಗಿ ಅವಮಾನಕ್ಕೊಳಗಾಗಿರುವ ಅವರ ತಂದೆ ಇನ್ನು ಮುಂದೆ ಈ ಮನೆಯಲ್ಲಿ ವಾಸ ಮಾಡಲು ಇಚ್ಚಿಸುತ್ತಿಲ್ಲ ಎಂದು ಹೇಳಲಾಗಿದೆ.
ಮೂರು ಬೆಡ್ ರೂಮ್ ಗಳಿರುವ ಫ್ಲ್ಯಾಟ್ ಇದಾಗಿದೆ. ಈ ಮಧ್ಯೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ರಾಗಿಣಿ ಮೊದಲ ರಾತ್ರಿ ಕಳೆದಿದ್ದಾರೆ. ಅವರನ್ನು ಜೈಲ್ಲಿನ ಕ್ವಾರಂಟೈನ್ ಕೊಠಡಿಯಲ್ಲಿ ಇರಿಸಲಾಗಿದೆ.