newsics.com
ಬೆಂಗಳೂರು: ಚಂದನವನದ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಗಳಾಗಿ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಮತ್ತು ನಟಿ ರಾಗಿಣಿ ಜೈಲುವಾಸದಿಂದ ಕಂಗಾಲಾಗಿದ್ದಾರಂತೆ. ಸಾಲದ್ದಕ್ಕೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿಚಾರಣೆಯಿಂದ ಸುಸ್ತಾಗಿದ್ದಾರಂತೆ. ಇಡಿ ವಿಚಾರಣೆ ಇಬ್ಬರೂ ನಟಿಯರನ್ನು ಹೈರಾಣಾಗಿಸಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಮಂಗಳೂರಿನಲ್ಲಿ ಮತ್ತೊಬ್ಬ ಡ್ರಗ್ ಪೆಡ್ಲರ್ ಬಂಧನ
ಸಿಸಿಬಿ ವಿಚಾರಣೆಯಿಂದಲೇ ಹೈರಾಣಾಗಿದ್ದ ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರಿಗೆ ಇಡಿ ಶಾಕ್ ನೀಡಿದೆ. ಕಳೆದ 2 ದಿನಗಳಿಂದ ಇಡಿ ನಡೆಸುತ್ತಿರುವ ಸತತ ವಿಚಾರಣೆಯಿಂದ ಮಾದಕ ಸುಂದರಿಯರು ಬಸವಳಿದಿದ್ದಾರೆ. ಅಧಿಕಾರಿಗಳು ಐಷಾರಾಮಿ ಜೀವನ, ಆದಾಯ ಮೀರಿ ಆಸ್ತಿ ಗಳಿಕೆ ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕೋರಿಕೆ ಮೇರೆಗೆ ಇಂದು ವಿಚಾರಣೆಗೆ ವಿರಾಮ ನೀಡಿದ್ದು, ನಾಳೆ ಮತ್ತೆ ವಿಚಾರಣೆ ಮುಂದುವರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಎನ್ ಸಿ ಬಿಯಿಂದ ನಟಿ ದೀಪಿಕಾ ಪಡುಕೋಣೆ ಮತ್ತೆ ವಿಚಾರಣೆ ಸಾಧ್ಯತೆ
ನಟ ಶರಣ್ ಆಸ್ಪತ್ರೆಯಿಂದ ಡಿಸ್ಚಾರ್ಜ್