ನಾಪೋಕ್ಲು (ಕೊಡಗು): ನಾಪೋಕ್ಲು ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಸಂಜೆ ದಿಢೀರ್ ಮಳೆಯಾಗಿದೆ. ಇದು ವರ್ಷದ ಮೊದಲ ಮಳೆಯೂ ಆಗಿದ್ದರೂ ಅವಧಿಗೂ ಮೊದಲೇ ಸುರಿದ ಮಳೆಯಿಂದ ಕಾಫಿ ಬೆಳೆಗಾರರು ಆತಂಕಗೊಂಡಿದ್ದಾರೆ. ಕಾಫಿ ಹೂವಿನ ಮಳೆಯ ನಿರೀಕ್ಷೆಯಲ್ಲಿರುವ ಬೆಳೆಗಾರರಿಗೆ ಅವಧಿಗೂ ಮುನ್ನ ಸುರಿಯುವ ಮಳೆ ಆತಂಕ ತಂದೊಡ್ಡಿದೆ.
ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲಿನ ಕೆಲಸ ಬಿರುಸಿನಿಂದ ಸಾಗುತ್ತಿದ್ದು ಮನೆಯಂಗಳ, ಕಣ ಹಾಗೂ ಗದ್ದೆಗಳಲ್ಲಿ ಬೆಳೆಗಾರರು ಕಾಫಿಯನ್ನು ಒಣಗಲು ಹಾಕಿದ್ದು ಮಳೆಯಿಂದ ತೊಂದರೆ ಅನುಭವಿಸುವಂತಾಯಿತು.
ಕೊಡಗಿನಲ್ಲಿ ಮಳೆ!
Follow Us